ಬೆಂಗಳೂರು,ಜೂನ್,1,2023(www.justkannada.in): 19 ಕೆಜಿಯ ಕಮರ್ಷಿಯಲ್ ಎಲ್ ಪಿಸಿ ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿಕೆಯಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದ್ದು. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ.
ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಏತನ್ಮಧ್ಯೆ, ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ 172 ರೂ.ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ 250 ರೂ.ನಷ್ಟು ಕಡಿಮೆಯಾಗಿದೆ ಎನ್ನಬಹುದು.
ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆ 1,856.50 ರೂ. ನಷ್ಟಿತ್ತು ಅದು 1,773 ರೂ.ಗೆ ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.
19 ಕೆಜಿ ವಾಣಿಜ್ಯ ಸಿಲಿಂಡರ್ ಪ್ರಸ್ತುತ ದೆಹಲಿಯಲ್ಲಿ 1773 ರೂ. ಕೊಲ್ಕತ್ತಾದಲ್ಲಿ 1875.50 ರೂ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1937ರೂ. ಆಗಿದೆ.
Key words: Reduction – commercial –gas- cylinder -rates.