ಮೈಸೂರು,ನವೆಂಬರ್,15,2021(www.justkannada.in): ಮೈಸೂರು ಮಹಾನಗರ ಪಾಲಿಕೆಯು ಇಂದು ಮನೆಗಳಲ್ಲಿ ನೇರವಾಗಿ ಒಳಚರಂಡಿಗೆ ಸಂಪರ್ಕ ಕಲ್ಪಿಸಿದ್ಧ ಮಳೆ ನೀರಿನ ಕೊಳವೆ ಮಾರ್ಗಗಳ ಕಡಿತ ಕಾರ್ಯಾಚರಣೆ ಮಾಡಲಾಯಿತು.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಮನೆಗಳ ಮೇಲ್ಛಾವಣಿ ನೀರಿನ ಪೈಪ್ ಲೈನ್ ನನ್ನು ನೇರವಾಗಿ ಒಳಚರಂಡಿ ಕೊಳವೆ ಮಾರ್ಗಕ್ಕೆ ಸಂಪರ್ಕಿಸಿರುವುದು ಕಂಡುಬಂದಿತ್ತು. ಅಂತಹ ಮನೆಗಳ ಕೊಳವೆ ಮಾರ್ಗಗಳನ್ನು ಕಡಿತಗಳಿಸಿ ತೆರದ ಚರಂಡಿಗೆ ಸಂಪರ್ಕ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಗಿತ್ತು. ತಪ್ಪಿದಲ್ಲಿ ರೂ.2000/-ಗಳ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಲಾಗಿತ್ತು.
ಆದರೂ ಸಹ ಸಾರ್ವಜನಿಕರು ಕೊಳವೆ ಮಾರ್ಗವನ್ನು ಕಡಿತಗೊಳಿಸಿರಲಿಲ್ಲ. ಹೀಗಾಗಿ ಅಂತಹ ಪ್ರದೇಶಗಳಲ್ಲಿ ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಾರ್ಯಾಚರಣೆ ಮಾಡಿ ಮಳೆ ನೀರಿನ ಕೊಳವೆ ಮಾರ್ಗವನ್ನು ಕಡಿತಗೊಳಿಸಲಾಗುತ್ತಿದೆ.
Key words: Reduction -rain water pipelines – Mysore city corporation