ಭಾರತದ ಜೀವನ ಚರಿತ್ರೆ, ಸಂಸ್ಕೃತಿ ಪ್ರತಿಬಿಂಬಿಸುವ ಮಹಾಕಾವ್ಯ ರಾಮಾಯಣ :  ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,31,2020(www.justkannada.in) : ರಾಮಾಯಣವು ಭಾರತದ ಜೀವನ ಚರಿತ್ರೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದ್ದು, ರಾಮಾಯಣ ಹಾಗೂ ವಾಲ್ಮೀಕಿ ಸೂರ್ಯಚಂದ್ರರು ಇರುವವರೆಗೆ ಅಜರಾಮರ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-logo

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಶನಿವಾರ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಎಲ್ಲಾ ಸಂಕಟಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ

ರಾಮಾಯಣ ಕಾವ್ಯವು ವಿಶ್ವದ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ದೇಶ, ಭಾಷೆಗೆ ಸೀಮಿತವಾಗದೇ ಜಾಗತಿಕವಾಗಿ ಆರಾಧಿಸಲ್ಪಟ್ಟ ಕಾವ್ಯವಾಗಿದೆ. ಜನಸಮುದಾಯದ ಎಲ್ಲಾ ಸಂಕಟಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಕಾವ್ಯವನ್ನು ಅರ್ಥಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ರಾಮಾಯಣವು ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ

ವಾಲ್ಮೀಕಿ ರಾಮಾಯಣವು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದು, ಸಂಸ್ಕೃತದಲ್ಲಿ ರಚಿಸಲಾಗಿದೆ. 24 ಸಾವಿರ ಶ್ಲೋಕಗಳನ್ನು ಒಳಗೊಂಡಿದ್ದು, ಒಟ್ಟು ಏಳು ಕಾಂಡಗಳಾಗಿ ಕಾಣಬಹುದಾಗಿದೆ. ಕಾಲಕಾಲಕ್ಕೆ ಸಂಸ್ಕೃತ, ಪ್ರಾಕೃತ ಸೇರಿದಂತೆ ದೇಶ ಭಾಷೆಗಳಲ್ಲಿ ರಾಮಾಯಣ ರಚನೆಯಾಗಿದ್ದು, ಅನೇಕ ಕವಿಗಳ ಆಕರ್ಷಿಸಿದೆ ಎಂದು ಸ್ಮರಿಸಿದರು. Reflecting-biography-culture-India-epic-Ramayana-Chancellor-Prof.G.Hemant Kumar

ಪ್ರಕೃತಿಯನ್ನು ಮಹಾಕಾವ್ಯದಲ್ಲಿ ವಾಲ್ಮೀಕಿ ವರ್ಣಿಸಿದ್ದಾರೆ

ಭಾರತದ ಅರಣ್ಯ, ಸಮುದ್ರ, ಜಲಪಾತ, ಪರ್ವತಗಳು ಹೀಗೆ ಪ್ರಕೃತಿಯನ್ನು ಮಹಾಕಾವ್ಯದಲ್ಲಿ ವಾಲ್ಮೀಕಿ ವರ್ಣಿಸಿದ್ದಾರೆ. ವಿಭಿನ್ನ ಕವಿಗಳು ಮೂಲ ವಾಲ್ಮೀಕಿ ರಾಮಾಯಣಕ್ಕೆ ಒಳಹೊಕ್ಕು ಹೊಸದಾಗಿ ರಾಮಾಯಣ ರಚಿಸಿದ್ದಾರೆ. ಹೀಗಾಗಿಯೂ, ಮೂಲ ರಾಮಾಯಣದ ಸೊಗಸು ಹಾಗೇ ಇದೆ ಎಂದು ಹೇಳಿದರು.

ವಾಲ್ಮೀಕಿಯವರು ಕವಿಗಳ ಕವಿಯಾಗಿದ್ದಾರೆ. ಕುವೆಂಪು ಅವರು ವಾಲ್ಮೀಕಿ ಹಾಗೂ ರಾಮಾಯಣ ಮಹಾಕಾವ್ಯ ನಮಗೆ ದೊರೆತಿರುವುದು ಭುವನಭಾಗ್ಯ ಎಂದು ಹೇಳಿದ್ದಾರೆ. ಜೀವರಾಶಿಗಳು ಇರುವವರೆಗೆ ರಾಮಾಯಣ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಶಾಶ್ವತ ಎಂದು ತಿಳಿಸಿದರು.

ಶ್ರೀ ಮಹರ್ಷಿ ವಾಲ್ಮೀಕಿ ಒಂದು ವರ್ಗಕ್ಕೆ ಮಾತ್ರ ಸೀಮಿತರಲ್ಲ

ಶ್ರೀ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶ ವಿಷಯ ಕುರಿತು ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಒಂದು ವರ್ಗಕ್ಕೆ ಮಾತ್ರ ಸೀಮಿತರಲ್ಲ. ಅವರು ಎಲ್ಲ ವರ್ಗಕ್ಕೂ ಸೇರಿದವರಾಗಿದ್ದಾರೆ ಎಂದರು.

ಭೂಮಿಯಿರುವವರೆಗೆ ರಾಮಾಯಣ ಮತ್ತು ಅದರ ಕರ್ತೃ ವಾಲ್ಮೀಕಿ ಶಾಶ್ವತ

 Reflecting-biography-culture-India-epic-Ramayana-Chancellor-Prof.G.Hemant Kumar

ಸಂಬಂಧ, ತ್ಯಾಗ, ಪ್ರೀತಿ ಹೀಗೆ ಮೌಲ್ಯಗಳನ್ನು ರಾಮಾಯಣ ಮಹಾಕಾವ್ಯವು ಎತ್ತಿ ಹಿಡಿದಿದೆ. ರಾಮಾಯಣ ಮತ್ತು ಅದರ ಕರ್ತೃ ವಾಲ್ಮೀಕಿಯವರಿಗೆ ಸಾವಿಲ್ಲ. ಭೂಮಿಯಿರುವವರೆಗೆ ರಾಮಾಯಣ ಮತ್ತು ಅದರ ಕರ್ತೃ ವಾಲ್ಮೀಕಿ ಶಾಶ್ವತ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಮಹದೇವನ್  ಉಪಸ್ಥಿತರಿದ್ದರು.

key words : Reflecting-biography-culture-India-epic-Ramayana-Chancellor-Prof.G.Hemant Kumar