ಶಿವಮೊಗ್ಗ,ಜೂನ್,19,2023(www.justkannada.in): ಹೆಚ್ಚುವರಿ ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ. ನಾವು ಬೇರೆ ಯಾವುದೇ ಬ್ಯುಸಿನೆಸ್ ಮಾಡ್ತಿಲ್ಲ. ಕೇಂದ್ರಕ್ಕೆ 3 ಲಕ್ಷ ಕೋಟಿಯಷ್ಟು ಜಿಎಸ್ ಟಿ ರಾಜ್ಯದಿಂದಲೇ ಹೋಗುತ್ತೆ. ಆದ್ರೆ ಕೇಂದ್ರ ನಮಗೆ 50ರಿಂದ 60 ಸಾವಿರ ಕೋಟಿ ಕೊಡುತ್ತೆ ಅಷ್ಟೇ. ಬಿಜೆಪಿ ನಾಯಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬಡವರಿಗೆ ತಲಾ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು.
ನಾವು ಕೇಳುತ್ತಿರುವುದು ಹೊಟ್ಟೆಗೆ ಅನ್ನ ಬೇರೆನೂ ಅಲ್ಲ. ರಾಜ್ಯದಲ್ಲಿ ಹೆಚ್ಚು ಜಿಎಸ್ ಟಿ ಸಂಗ್ರಹಿಸಿ ಕಡಿಮೆ ಅನುದಾನ ಕೊಡುತ್ತಿದ್ದಾರೆ. ಸಂಸದರು ಮೋದಿ ಮನೆ ಮುಂದೆ ಪ್ರತಿಭಟಿಸಿದ್ದಾರಾ..? ಮೊದಲು ಅಕ್ಕಿ ಕೊಡ್ತೇವೆ ಅಂದ್ರು . ಈಗ ಕೊಡಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂಧು ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
Key words: Refusal – Rice- Supply-Minister -Madhu Bangarappa – against – central government.