ಮೈಸೂರು,ಸೆಪ್ಟಂಬರ್,9,2021(www.justkannada.in): “ಗುರುಶಿಷ್ಯ ಸಂಬಂಧ ಪವಿತ್ರವಾದದ್ದು ಎಂದು ಮೈಸೂರು ವಿವಿ ಉಪ ಕುಲಸಚಿವ ಡಾ.ಬಸಪ್ಪ ಅಭಿಮತ ವ್ಯಕ್ತಪಡಿಸಿದರು.
ಮೈಸೂರು ವಿ.ವಿ ಸಂಜೆ ಕಾಲೇಜು ಕನ್ನಡ ವಿಭಾಗದ ವತಿಯಿಂದ ಏರ್ಪಡಿಸಿದ್ದ“ಶಿಕ್ಷಕರ ದಿನಾಚರಣೆ ಹಾಗೂ ಅಂತಿಮ ವರ್ಷದ ಪದವಿ ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಪ ಕುಲಸಚಿವ ರಾ.ಬಸಪ್ಪ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಅ೦ದಿನಿಂದ ಇಂದಿನವರೆಗೂ ಸಂಬಂಧ ಪಾವಿತ್ರ್ಯತೆಯಿಂದ ಕೂಡಿದೆ. ಗುರುವಿನ ಮಾರ್ಗದರ್ಶನದಲ್ಲಿ ದೇಶ ಕಟ್ಟುವ, ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಸಮಾಜಮುಖಿ ಚಿಂತನೆಗಳು ಕಾರ್ಯರೂಪಕ್ಕೆ ಬಂದಿವೆ. ಬುದ್ಧ, ಬಸವ, ಕನಕ, ಗಾಂಧಿ, ಸ್ವಾಮಿವಿವೇಕಾನಂದ, ಅಂಬೇಡ್ಕರ್, ಸರ್ವಪಲ್ಲಿ ರಾಧಾಕೃಷ್ಣನ್ ಅಬ್ದುಲ್ ಕಲಾಂ, ಕುವೆಂಪು ರಂತಹ ಗುರುಗಳು ಮೇರು ಸದೃಶ ಗುರುಗಳು ಈ ಪುಣ್ಯಭೂಮಿಯಲ್ಲಿ ಶ್ರೇಷ್ಠವಾದ, ಮಾನವೀಯ ಮೌಲ್ಯಗಳ ಬೀಜವನ್ನು ಭಿತ್ತಿ ಹೋಗಿದ್ದಾರೆ. ಅವರು ಭಿತ್ತಿರುವ ಅಸಂಖ್ಯಾತ ಅಮೂಲ್ಯವಾದ ಬೀಜಗಳು ಸಮೃದ್ಧವಾದ ಫಸಲನ್ನ ನೀಡಿ ಮನುಕುಲ ಇರುವವರೆವಿಗೂ ಮಾರ್ಗತೋರುವ ದಿವ್ಯಜ್ಯೋತಿಗಳಾಗಿವೆ. ಈ ಬೆಳಕಿನಲ್ಲಿ ನಡೆದು ಗುರುಶಿಷ್ಯ ಸಂಬಂಧದ ಬಾಂಧವ್ಯಕ್ಕೆ ನೆಲೆಬೆಲೆ ತರುವಂತೆ ನಡೆದುಕೊಳ್ಳಬೇಕೆಂದರು.
ಸಮಾರಂಭದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ.ಅನಿಟವಿಮಲ, ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಸಿ.ದೇವರಾಜೇಗೌಡ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಕೆ.ಅಕ್ಕಮಹಾದೇವಿ, ಸಹಪ್ರಾಧ್ಯಾಪಕ ಡಾ.ಸಿ.ಡಿ.ಪರಶುರಾಮ ಉಪಸ್ಥಿತರಿದ್ದರು. ವಿದ್ಯಾರ್ಥಿ ಮುಖಂಡ ಸಣ್ಣಮಾದು ನಿರೂಪಿಸಿದರೆ, ರಶ್ಮಿ ಸ್ವಾಗತಿಸಿದರು. ಮಹಾಂತೇಶ್ ವಂದಿಸಿದರು. ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ಪುಸ್ತಕಗಳನ್ನು ನೀಡಲಾಯಿತು.
Key words: Relationship –teachers-students-Sacred – Mysore university-Dr. Basappa