ಮೈಸೂರು,ಜನವರಿ,3,2021(www.justkannada.in): ಕಾರ್ಯಕ್ರಮವೊಂದರ ವೇದಿಕೆಯ ಮೇಲೆಯೇ ಸಚಿವ ಅಶ್ವಥ್ ನಾರಾಯಣ್ ಮತ್ತು ಸಂಸದ ಡಿ.ಕೆ ಸುರೇಶ್ ನಡುವಿನ ಕಿತ್ತಾಟ ಕುರಿತು ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿಯಾದ್ರೂ ರಾಮನಗರದಲ್ಲಿ ಕೆಲ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ಆದರೆ ಏನು ಅಭಿವೃದ್ಧಿ ಮಾಡದ ಅಶ್ವಥ್ ನಾರಾಯಣ್ ಗೂ ರಾಮನಗರಕ್ಕೂ ಏನು ಸಂಬಂಧ…? ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಮನಗರದಲ್ಲಿ ಯಾವ ಅಭಿವೃದ್ದಿಯನ್ನು ಮಾಡದ ಅಶ್ವಥ್ ನಾರಾಯಣ್ ರಾಮನಗರದ ಬಗ್ಗೆ ಮಾತಾನಾಡುವುದು ಸರಿಯಲ್ಲ. ವೇದಿಕೆಯಲ್ಲಿ ಏನು ಸುಳ್ಳು ಹೇಳಿದ್ರೋ ,ಯಾಕೆ ಗಲಾಟೆ ಆಯ್ತೋ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ. ಸೌಜನ್ಯಕ್ಕಾದರೂ ಅಶ್ವಥ್ ನಾರಾಯಣ್ ನಮ್ಮ ಜೊತೆ ಮಾತನಾಡಿಲ್ಲ ಎಂದು ಕಿಡಿಕಾರಿದರು.
ರಾಮನಗರದಲ್ಲಿ ಅಂಬೇಡ್ಕರ್, ಕೆಂಪೇಗೌಡ ಪ್ರತಿಮೆ ಯಾರು ಕಟ್ಟಿದ್ದು? ಅಶ್ವಥ್ ನಾರಾಯಣ್ ಕಟ್ಟಿದ್ರಾ?, ಅದು ನಮ್ಮ ಕೊಡುಗೆ. ರಾಜಕೀಯ ಏನೆ ಇರಲಿ ಕುಮಾರಸ್ವಾಮಿ ಒಂದಷ್ಟು ಕಟ್ಟಡ ಕಟ್ಟಿದ್ದಾರೆ. ಅದನ್ನು ಒಪ್ಪಿಕೊಳ್ಳುವ ವಿಚಾರ. ಆದ್ರೆ ಅಶ್ವಥ್ ನಾರಾಯಣ ಯಾರು ? ರಾಮನಗರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
Key words: relationship – undevelopment -Ashwath Narayan – Ramanagar-DK Shivakumar