ಮಂಗಳೂರು, ಡಿ,20,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದರು. ಈ ನಡುವೆ ಇದೀಗ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದಿದೆ.
ಇನ್ನು ನಿನ್ನೆ ನಡೆದ ಘಟನೆ ಬಗ್ಗೆ ವರದಿ ಮಾಡಲು ಕೇರಳಾದಿಂದ ಬಂದಿದ್ದ ಐವತ್ತುಮಂದಿ ಪತ್ರಕರ್ತರ ತಂಡವನ್ನ ಪೊಲೀಸರು ನಕಲಿ ಪತ್ರಕರ್ತರೆಂದು ಬಂಧಿಸಿದ್ದರು. ಇದೀಗ ಈ ಐವತ್ತು ಮಂದಿ ಪತ್ರಕರ್ತರನ್ನ ಬಿಡುಗಡೆ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ಇಬ್ಬರ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ, ಆಸ್ಪತ್ರೆ ಸುತ್ತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಈ ಸಂದರ್ಭ ಆಸ್ಪತ್ರೆ ಪ್ರವೇಶಿಸಲು ಬಂದಿದ್ದ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಪತ್ರಕರ್ತರು ನಕಲಿಯಲ್ಲವೆಂದು ಗೊತ್ತಾದ ಮೇಲೆ ಅವರನ್ನ ಬಿಡುಗಡೆ ಮಾಡಿ ಕೇರಳಾಗೆ ಕಳುಹಿಸಲಾಗಿದೆ. ಪತ್ರಕರ್ತರನ್ನು ನಕಲಿ ಪತ್ರಕರ್ತರು ಎಂದು ಬಿಂಬಿಸಿ ವಶಕ್ಕೆ ಪಡೆದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಗೊಂಡಿದೆ.
Key words: release – 50 journalists-detained – police – mangalore