ಮಂಡ್ಯ,ಆಗಸ್ಟ್,10,2023(www.justkannada.in): ಆರಂಭದಲ್ಲಿ ಮುಂಗಾರು ಮಳೆ ಕೈಗೊಟ್ಟರೂ ನಂತರ ಜುಲೈನಲ್ಲಿ ಮಳೆ ಉತ್ತಮವಾಗಿದ್ದು ಬರಿದಾಗಿದ್ದ ಕೆಆರ್ ಎಸ್ ಡ್ಯಾಂಗೆ ನೀರು ಹರಿದು ಬಂದಿದೆ. ಈ ಮಧ್ಯೆ ಇದೀಗ ಇಂದಿನಿಂದಲೇ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ.
ಷರತ್ತು ವಿಧಿಸಿ ಕೆಆರ್ ಎಸ್ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ನೀರು ಹರಿಸಲಾಗುತ್ತಿದೆ.
ದೀರ್ಘಾವಧಿ ಬೆಳೆ ಬೆಳೆಯದಂತೆ ರೈತರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 15 ದಿನ ನೀರು ಹರಿಸಿ 15 ದಿನ ನೀರು ಸ್ಥಗಿತಗೊಳಿಸಿಲು ತೀರ್ಮಾನಿಸಲಾಗಿದೆ. ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆ ಇರುವ ಹಿನ್ನೆಲೆ ಕಟ್ಟು ಪದ್ದತಿಯಲ್ಲಿ ನೀರು ಹರಿಸಲು ತೀರ್ಮಾನಿಸಿದ್ದಾರೆ. ಪ್ರಮುಖ ಬೆಳೆ ಬೆಳೆದು ನಷ್ಟವಾದರೆ ಇಲಾಖೆ ಜವಾಬ್ದಾರರಲ್ಲ ಎಂದು ಅಧಿಕಾರಿಗಳಿಗೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ.
Key words: Release – water – KRS Reservoir – canals – imposing -conditions.