ಬೆಂಗಳೂರು,ಏಪ್ರಿಲ್,15,2021(www.justkannada.in): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಎಸ್.ಸೋಮಶೇಖರ್ ಜಿಗಣಿ ಅವರು ರಚಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ‘ಇವರೆ ಮಹಾನಾಯಕ’ ಎಂಬ ವಿನೂತನ ಆಲ್ಬಂ ಗೀತೆಯನ್ನು ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಹಾಡಿದ್ದು, ನಟ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ ನ ಯುಟ್ಯೂಬ್ ಚಾನೆಲ್ನಲ್ಲಿ ಗೀತೆ ಬಿಡುಗಡೆಯಾಗಿದೆ.
ಗೀತೆಯ ಪರಿಕಲ್ಪನೆ ಹಾಗೂ ನಿರ್ದೇಶನವನ್ನು ಸೋಮಶೇಖರ್ ಜಿಗಣಿ ಅವರು ಮಾಡಿದ್ದು, ನೀತೂ ನಿನಾದ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಗ ಸಂಯೋಜನೆಯನ್ನು ಸೋಮಶೇಖರ್ ಜಿಗಣಿ ಮತ್ತು ನೀತು ನಿನಾದ್ ಅವರು ಅತ್ಯದ್ಭುತವಾಗಿ ಕೈಗೊಂಡಿದ್ದು, ಸುರೇಶ್ ಸಿದ್ದಲಿಂಗಯ್ಯ ಅವರು ನಿರ್ಮಾಣ ಮಾಡಿದ್ದಾರೆ. ಈ ಸುಂದರ ಗೀತೆಗೆ ವಿದ್ವತ್ ಇನ್ನೋವೇಟಿವ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕೈಜೋಡಿಸಿದೆ. ಪಿಆರ್ ಒ ಆಗಿ ಶ್ರೇಯ ಬಾಬು ಕೆಲಸ ಮಾಡಿದ್ದಾರೆ.
ಸೋಮಶೇಖರ್ ಜಿಗಣಿ ಅವರು ಸಾಹಿತ್ಯಾಶಕ್ತರಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಸೋಮಶೇಖರ್ ಜಿಗಣಿ, ಸಂಗೀತ ನಿರ್ದೇಶಕ ನೀತೂ ನಿನಾದ್ ಹಾಗೂ ಪಿಆರ್ಒ ಶ್ರೇಯಾ ಬಾಬು ಅವರ ತಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ‘ನಾರಿಶಕ್ತಿ’ ಎಂಬ ಶೀರ್ಷಿಕೆಯಡಿ ಆಲ್ಬಂ ಗೀತೆಯೊಂದನ್ನು ರಚಿಸಿ ಬಿಡುಗಡೆ ಮಾಡಿದ್ದರು. ಸೋಮಶೇಖರ್ ಅವರ ಸಾಹಿತ್ಯಕ್ಕೆ ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು, ಖ್ಯಾತ ಕೊರಳು ವಾದಕ ಪ್ರವೀಣ್ ಗೋಡ್ಖಿಂಡಿ, ಸಂಗೀತ ನಿರ್ದೇಶಕ ರಘು ದೀಕ್ಷಿತ್, ಗಾಯಕಿ ಅನನ್ಯ ಭಟ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Key words: Released –evare mahanayaka- album song- Youtube Channel