ಬೆಂಗಳೂರು, ಮೇ 16, 2021 (www.justkannada.in): ಕಾಂಗ್ರೆಸ್ ಪಕ್ಷ ಲಸಿಕೆ ವಿಚಾರದಲ್ಲಿ ಯಾವತ್ತು ಅಪಪ್ರಚಾರ ಮಾಡಿಲ್ಲ. ಆದರೆ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ತಲೆ ಕೆಟ್ಟು ಹೋಗಿದೆ. ಸಿಟಿ ರವಿಗೆ ತಲೆ ಕೆಟ್ಟು ಹೋಗಿದೆ. ನ್ಯಾಯಾಲಯಕ್ಕೆ ಬೈಯುವ ಕೆಲಸ ಮಾಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟೀಕಿಸಿದ್ದಾರೆ.
ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಲಸಿಕೆ ಉತ್ಪಾದ ಆಗದಿದ್ದರೆ ನಾವು ನೇಣು ಹಾಕೊಕೊಳ್ಳಬೇಕಾ ಎನ್ನುತ್ತಾರೆ. ಆಗಿದ್ದರೆ ಮತದಾರರು ನೇಣು ಹಾಕಿಕೊಳ್ಳಬೇಕಾ ? ಮತದಾರರು ನೇಣು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ನಿಮ್ಮಮಾತಿನ ಅರ್ಥ ಎಂದಿದ್ದಾರೆ.
ಇನ್ನು ಲಸಿಕೆ ವಿಚಾರ ಸ್ಥಳೀಯರಿಗೆ ಲಸಿಕೆ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ರಿಜಿಸ್ರ್ಟ್ರೇಷನ್ ಗೊತ್ತಾಗುವುದಿಲ್ಲ. ಗ್ರಾಮೀಣ ಪ್ರದೇಶದ ಜನರನ್ನು ಸಾಯಿಸಲು ಮುಂದಾಗಿದೆ ಸರ್ಕಾರ. ಪೋರ್ಟಲ್ ರಿಜಿಸ್ಟರ್ ಮಾಡಿಕೊಂಡು ವಾಕ್ಸಿನ ತೆಗೆದುಕೊಳ್ಳಬೇಕು ಎಂಬುದು ಮಾಡ್ತೀರಿ. ಹಳ್ಳಿ ಜನರ ಎಲ್ಲ ಆ್ಯಂಡ್ರೈಂಡ್
ಮೊಬೈಲ್ ಬಳಸುತ್ತಾರಾ.? ಬೆಂಗಳೂರಿನವರು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ಹಳ್ಳಿಗಳಿಗೆ ಬಂದು ವ್ಯಾಕ್ಸಿನ ತೆಗೆದುಕೊಂಡು ಹೋಗುತ್ತೀದ್ದಾರೆ.
ಹಳ್ಳಿಗರು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಇದು ಬಿಜೆಪಿಯವರ ದುರಾಆಡಳಿತ ಎಂದು ಎಂ ಲಕ್ಷ್ಮಣ ಆರೋಪಿಸಿದ್ದಾರೆ.
ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ಬಿಟ್ಟರೆ ಭಾರತಕ್ಕೆ ಎರಡನೇ ಸ್ಥಾನ
ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ಬಿಟ್ಟರೆ ಎರಡನೇ ಸ್ಥಾನದಲ್ಲಿ ಇದ್ದೇವೆ.ಮುಂದೆ ಭಾರತ ಮೊದಲೆ ಸ್ಥಾನ ಪಡೆಯಲಿದೆ. ಭಾರತದಲ್ಲಿ 138 ಕೋಟೆ ಜನಸಂಖ್ಯೆ ಇದೆ. 215 ಕೋಟಿಗೆ ಲಸಿಕೆಯನ್ನು ಇವರು ಆರ್ಡರ್ ಮಾಡೇ ಇಲ್ಲ. ಇವರು ಖರೀದಿ ಮಾಡಿದ್ದೀರಾ.?
ಬೇಡಿಕೊಂಡರು ಲಸಿಕೆ ಸಿಕ್ತಾ ಇಲ್ಲ. ಅಶ್ವಥ್ ನಾರಾಯಣ್ ಗ್ಲೋಬಲ್ ಟೆಂಡರ್ ಕರಿತೀವಿ ಅಂತ ಹೇಳ್ತೀರಿ. ಲಸಿಕೆನೆ ಲಭ್ಯ ಇಲ್ಲದಮೇಲೆ ಗ್ಲೋಬಲ್ ಟೆಂಡರ್ ಯಾರಿಗೆ ಕರಿತಾ ಇದೀರಿ ಎಂದು ಪ್ರಶ್ನಿಸಿದರು.
ಇದು ಜನರಿಗೆ ಕಣ್ಣೊರೆಸುವುದು, ಮಂಕುಬೂದಿ ಎರಚುವ ಕೆಲ ಮಾಡ್ತಾ ಇದೀರಿ.
ಆಕ್ಸಿಜನರೇಟರ್’ಗೆ ಟೆಂಡರ್ ಪ್ರಕ್ರಿಯೆ ಇಲ್ಲದೆ ನೇರವಾಗಿ ಆಕ್ಸಿಜನರೇಟರ್ ತೆಗೆದುಕೊಳ್ಳುತ್ತಿದ್ದಾರೆ. ಕಳೆದ 15 ದಿನದಿಂದ ಟೆಸ್ಟ್ ಸಂಖ್ಯೆ ಕಡಿಮೆ ಮಾಡ್ತಾ ಇದೀರಿ. ಸೋಂಕಿತರ ಕೊರೊನಾ ಟೆಸ್ಟ್ ಮಾಡಿಸದೆ ಇರೋದು ಸೊಂಕಿತರು ಹೆಚ್ಚಾಗಲು ಕಾರಣ.
ಸಂಸದ ಪ್ರತಾಪ ಸಿಂಹ ಟಾಸ್ಕ್ ಫೋರ್ಸ್ ಸದಸ್ಯ ರಾದ ಮೇಲೆ ಎರಡನೆ ದಿನಕ್ಕೆ ಮೈಸೂರಿನಲ್ಲಿ ಕೊರೋನಾ ಕಡಿಮೆ ಆಯ್ತು ಅಂತ ಹೇಳ್ತಾರೆ. ಎಷ್ಟು ಸುಳ್ಳು ಹೇಳುತ್ತಾರೆ ನೋಡಿ, ಬಿಜೆಪಿ ವಕ್ತಾರ ಸಿದ್ದರಾಮಯ್ಯ ಕೊಡುಗೆ ಏನು ಅಂತ ಕೇಳ್ತಾರೆ. ಮೈಸೂರಿನ ಆಸ್ಪತ್ರೆಗಳು ಸಿದ್ದರಾಮಯ್ಯ ಕೊಡುಗೆ. ಇಲ್ಲ ಅಂದಿದ್ರೆ ಜನ ಬದಿಯಲ್ಲಿ ಸತ್ತುಹೋಗಿರೋರು ಎಂದು ತಿರುಗೇಟು ನೀಡಿದರು.