ಇಂದು ಸಂಜೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ತಕರಾರುಗಳಿದ್ದರೆ ಆಗಸ್ಟ್’ನಲ್ಲಿ ಪರೀಕ್ಷೆಗೆ ಅವಕಾಶ

ಬೆಂಗಳೂರು, ಜುಲೈ 20, 2021 (www.justkannada.in): ಇಂದು ಸಂಜೆ 4.30ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

ಇಂದು ಪ್ರಕಟವಾಗುವ ಫಲಿತಾಂಶದ ಬಗ್ಗೆ ಯಾವುದೇ ವಿದ್ಯಾರ್ಥಿಗೆ ತಕರಾರಿದ್ದರೆ ಅವರಿಗೆ ಮರು ಪರೀಕ್ಷೆ ಬರೆಯಲು ಆಗಸ್ಟ್ ತಿಂಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ. ಮೊದಲ ಬಾರಿಗೆ ಪರೀಕ್ಷೆ ಬರೆಯದೇ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ.

ಈ ಪೈಕಿ 5,90,153 ಮಂದಿ ಹೊಸ ವಿದ್ಯಾರ್ಥಿಗಳಿದ್ದರೆ, 76,344 ಮಂದಿ ಮರುಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿದ್ದಾರೆ.

ಸಿಬಿಎಸ್ ಇ ಮಾದರಿಯಲ್ಲಿ ಎಸ್‌ಎಸ್‌ಎಲ್ ಸಿ, ಪ್ರಥಮ ಪಿಯುಸಿ ಅಂಕ ಪರಿಗಣಿಸಿ ಫಲಿತಾಂಶ ನೀಡಲು ಸಿದ್ಧತೆ ಕೈಗೊಳ್ಳಲಾಗಿದ್ದು, ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ಫಲಿತಾಂಶ ಹೊರಬೀಳಲಿದೆ.

ENGLISH SUMMARY….

2nd PU exams today evening: If there are any objections, can appear for exams to be held in August
Bengaluru, July 20, 2021 (www.justkannada.in): The second PUC exam results will be announced today evening at 4.30 pm.
Students having any objections about the results can write the exam again that will be held in August.
The PU Board Director Snehal in her information has mentioned that 6,66,497 students are being promoted without writing exams. Out of them, 5,90,153 are fresh students and 76,344 are repeaters.
The 2nd PU results are announced based on the CBSE model. The evaluation has been made based on the performance of the students in SSLC and first PUC. Results are given in the form of marks instead of grades this time.
Keywords: 2nd PUC/ results/ today/ 4.30 pm/ PU Board