ರೇಣುಕಾಸ್ವಾಮಿ ಕೊಲೆ ಕೇಸ್:  ನಟ ದರ್ಶನ್ ವಿರುದ್ದ ಯಾವುದೇ ಸಾಕ್ಷ್ಯಗಳಿಲ್ಲ: ಸುಪ್ರೀಂಕೋರ್ಟ್ ನಲ್ಲಿ ವಾದ

ನವದೆಹಲಿ,ಏಪ್ರಿಲ್,22,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿಲಾಗಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.

ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ನಟ ದರ್ಶನ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ನಟ ದರ್ಶನ್ ವಿರುದ್ದ ಯಾವುದೇ ಸಾಕ್ಷ್ಯಗಳಿಲ್ಲ ಯಾವ ಜಾಗದಲ್ಲಿಯೂ ಸಾಕ್ಷ್ಯಾಧಾರಗಳು ಇಲ್ಲ ಎಂದರು.

ಈ ವೇಳೆ ಹತ್ಯೆ ಮಾಡಿದಕ್ಕೆ ಫೋಟೋಗಳಿವೆ ಎಂದು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ಹೇಳಿದರು. ವಾದ ಮುಂದುವರೆಸಿದ ಅಭಿಷೇಕ್ ಮನು ಸಿಂಘ್ವಿ  ಇಡೀ ಪ್ರಕರಣ ಎರಡು ಹೇಳಿಕೆ ಮೇಲೆ ನಿಂತಿದೆ ಪವಿತ್ರಾಗೆ ಕೆಟ್ಟ ಮೆಸೇಜ್ ಮಾಡಿದ್ದಾರೆ  ಅಂತಾ ಆರೋಪವಿದೆ.  ನಕಲಿ ಸಾಕ್ಷ್ಯಗಳನ್ನ ಸೃಷ್ಠಿ ಮಾಡಿದ್ದಾರೆ ಎಂದರು.

ಶೇಡ್ ಬಳಿ ನಡೆದ ಘಟನೆ ವಿವರಿಸಿದ ಪೊಲೀಸರ ಪರ ವಕೀಲ ಸಿದ್ದಾರ್ಥ್ ಲೂಥ್ರಾ,  ಎಲೆಕ್ಟ್ರಾನಿಕ್ ಎವಿಡೆನ್ಸ್ ಇದೆ.  ಸಿಸಿಟಿವಿ ದೃಶ್ಯ ಕೂಡ ಸಿಕ್ಕಿದೆ . ಎಲೆಕ್ಟ್ರಿಕ್ ಬಳಸಿ ರೇಣುಕಾಸ್ವಾಮಿಗೆ ಹಿಂಸೆ ನೀಡಲಾಗಿದೆ. ಮೂಳೆಗಳು ಮುರಿದವೆ ರಕ್ತ ಸುರಿದಿದೆ ದೇಹದ ಪ್ರಮುಖ ಭಾಗ ರಕ್ತ ಹೆಪ್ಪುಗಟ್ಟಿದೆ ಎಂದು ವಾದಿಸಿದರು.

Key words: Renukaswamy, Murder case,  actor Darshan, Supreme Court