ರೇಣುಕಾಸ್ವಾಮಿ ಕೊಲೆ ಕೇಸ್ : ಮೈಸೂರಿನಲ್ಲಿ ಸ್ಥಳ ಮಹಜರು: ಮಹತ್ವದ ಮಾಹಿತಿ ಸಂಗ್ರಹಿಸಿ ಹೊರಟ ಪೊಲೀಸರು.

ಮೈಸೂರು,ಜೂನ್,18,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಕರೆತಂದು ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ಥಳಮಹಜರು ಕರೆದೊಯ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸ್ಥಳ ಮಹಜರಿಗೆ ಆರೋಪಿ A 11 ನಾಗರಾಜ ಅಲಿಯಾಸ್ ನಾಗ ಹಾಗೂ ಆರೋಪಿ ಲಕ್ಷ್ಮಣ್ A12  ಕರೆದುಕೊಂಡು ಬಂದಿದ್ದರು. ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಕೆಲ ಆರೋಪಿಗಳು ಮೈಸೂರಿಗೆ ಬಂದ್ದಿದ್ದರು.  ಈ ಮಧ್ಯೆ ನಟ ದರ್ಶನ್ ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್ ನಲ್ಲಿದ್ದರು. ಹೀಗಾಗಿ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ತಂಗಿದ್ದರು. ಜೂನ್ 10 ರ ಬೆಳಿಗ್ಗೆ ಕುವೆಂಪುನಗರದ ಗೋಲ್ಡ್  ಜಿಮ್ ನಲ್ಲಿ ನಟ ದರ್ಶನ್ ವರ್ಕ್ ಔಟ್ ಮಾಡಿದ್ದರು.

ವರ್ಕ್ ಔಟ್ ಮುಗಿಸಿ ಹೋಟೆಲ್ ಗೆ ಹೊರಡುವ ವೇಳೆ ದರ್ಶನ್ ರನ್ನು ಪೊಲೀಸರು  ಅರೆಸ್ಟ್ ಮಾಡಿದ್ದರು. ಈ ಮಧ್ಯೆ ಇಬ್ಬರು ಆರೋಪಿಗಳನ್ನ ರ್ಯಾಡಿಸನ್ ಬ್ಲೂ ಹೋಟೆಲ್ ಗೆ ಕರೆತಂದು ಸ್ಥಳ ಮಹಜರು ನಡೆಸಿದರು. ಹೋಟೆಲ್ ಬಳಿ ಜನ ಸೇರುವ ಸಾದ್ಯತೆಯಿಂದ ನಟ ದರ್ಶನ್ ಕರೆ ತರಲಿಲ್ಲ ಎನ್ನಲಾಗಿದೆ

ಸುಮಾರು ಎರಡು ಗಂಟೆಗಳ ಕಾಲ ಸ್ಥಳ ಮಹಜರು ಕಾರ್ಯ ನಡೆದಿದ್ದು, ಪೊಲೀಸರು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಕೆಲವು ದಾಖಲೆಗಳ ಸಮೇತ ಆರೋಪಿಗಳನ್ನ ಕರೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಈ ವೇಳೆ ಪೊಲೀಸ್  ವಾಹನವನ್ನ  ನಟ ದರ್ಶನ್ ಅಭಿಮಾನಿಗಳು ಅಡ್ಡಗಟ್ಟಲು ಮುಂದಾಗಿದ್ದು, ಅಭಿಮಾನಿಗಳನ್ನು ಪಕ್ಕಕ್ಕೆ ಸರಿಸಿ ಬೆಂಗಳೂರಿನತ್ತ ಹೊರಟರು.

Key words: Renukaswamy, murder, case, Mysore, Police