ಬೆಂಗಳೂರು,ಡಿಸೆಂಬರ್,13,2024 (www.justkannada.in) : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಹೈಕೋರ್ಟ್ ಇದೀಗ ಜಾಮೀನು ನೀಡಿದೆ.
ಮೊದಲ ಆರೋಪಿ ಪವಿತ್ರಾಗೌಡಗೆ ಇಂದು ಜಾಮೀನು ಸಿಕ್ಕರೂ ಸೋಮವಾರ ಬಿಡುಗಡೆಯಾಗಲಿದ್ದಾರೆ. ಈ ಕುರಿತು ಪವಿತ್ರಗೌಡ ಪರ ವಕೀಲೆ ಶಿಲ್ಪಾ ಅವರು ಮಾಹಿತಿ ನೀಡಿದ್ದಾರೆ. ಪವಿತ್ರಾಗೌಡ ಸೋಮವಾರ ಬಿಡುಗಡೆಯಾಗಲಿದ್ದಾರೆ. ಕೊಲೆ ಪ್ರಕರಣದಲ್ಲಿ ಪವಿತ್ರಗೌಡ ಪಾತ್ರ ಏನಿದೆ ಎಂಬುದರ ಮೇಲೆ ಜಾಮೀನು ಸಿಕ್ಕೆ ಎಂದು ತಿಳಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ನಡೆದ ದರ್ಶನ್, ಪವಿತ್ರಗೌಡ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು. ನಟ ಆರೋಪಿಗಳು ತಲಾ ಇಬ್ಬರು ಶ್ಯೂರಿಟಿ ಒದಗಿಸಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ.
Key words: Renukaswamy, murder case, Pavithra Gowda, Monday