ಮೈಸೂರು,ಜೂನ್,18,2024 (www.justkannada.in): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೈಸೂರಿಗೆ ಇಬ್ಬರು ಆರೋಪಿಗಳನ್ನ ಕರತೆಂದು ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ಥಳಮಹಜರು ನಡೆಸುತ್ತಿದ್ದಾರೆ.
A 11 ನಾಗರಾಜ್ A12 ಲಕ್ಷ್ಮಣ್ ನನ್ನ ಪೊಲೀಸರು ಮೈಸೂರಿಗೆ ಕರೆತಂದಿದ್ದು ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ಥಳಮಹಜರು ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಗರಾಜ್ ದರ್ಶನ್ ಮ್ಯಾನೇಜರ್ ಆಗಿದ್ದು ಲಕ್ಷ್ಮಣ್ ಕಾರು ಚಾಲಕನಾಗಿದ್ದಾನೆ.
ಹೋಟೆಲ್ ನಲ್ಲಿರುವ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ನಂತರ ಆರೋಪಿಗಳು ರಾಡಿಸನ್ ಹೋಟೆಲ್ ನಲ್ಲಿ ಮೀಟಿಂಗ್ ನಡೆಸಿದ್ದರು ಎನ್ನಲಾಗಿದೆ. ನಟ ದರ್ಶನ್ ಡೆವಿಲ್ ಶೂಟಿಂಗ್ ಗಾಗಿ ರಾಡಿಸನ್ ಹೋಟೆಲ್ ನಲ್ಲಿ ತಂಗಿದ್ದರು.
Key words: Renukaswamy, murder, case, Police, Mysore