ಮೈಸೂರು,ನವೆಂಬರ್,3,2021(www.justkannada.in): ಭಾರಿ ಮಳೆಯಿಂದಾಗಿ ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ರಸ್ತೆ ಕುಸಿದಿತ್ತು. ಆದರೆ ಅದರ ದುರಸ್ತಿ ಕಾರ್ಯ ವಿಳಂಬ ಹಿನ್ನೆಲೆ ಇದೀಗ ಮತ್ತೆ ಅದೇ ಜಾಗದಲ್ಲಿ ಭೂಕುಸಿತವಾಗಿದೆ.
ಹಿಂದೆ ಕುಸಿದಿದ್ದ ರಸ್ತೆಯ ದುರಸ್ತಿ ವಿಳಂಬ ಹಿನ್ನೆಲೆ ಸುಮಾರು 70 ಅಡಿಯಷ್ಟು ರಸ್ತೆ ತಡೆಗೋಡೆ ಸಹಿತ ಕುಸಿದಿದೆ. ಅಕ್ಟೋಬರ್ 20ರಂದು ಭಾರಿ ಮಳೆಗೆ ರಸ್ತೆ ಕುಸಿದಿತ್ತು. ಸ್ಥಳಕ್ಕೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಹ ಭೇಟಿ ನೀಡಿ ದುರಸ್ತಿಗೆ ಸೂಚಿಸಿದ್ದರು.
ದುರಸ್ತಿ ಕಾರ್ಯ ವಿಳಂಬ ಹಿನ್ನೆಲೆ ಮತ್ತದೇ ಜಾಗದಲ್ಲಿ ಭೂ ಕುಸಿತ ಉಂಟಾಗಿದೆ. ದುರಸ್ತಿ ಕಾರ್ಯ ವಿಳಂಬವಾದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ತಿಗೆ ತಜ್ಞರು ಸಲಹೆ ನೀಡಿದ್ದಾರೆ.
Key words: Repair –delay- Land collapse. -again –mysore- Chamundi Hill.