ಮೈಸೂರು,ಜನವರಿ,24,2021(www.justkannada.in) : ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಟ್ರ್ಯಾಕ್ಟರ್, ಜೀಪ್, ಬೈಕ್ ಮೂಲಕ ಪರೇಡ್ ನಡೆಸಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಪರೇಡ್ ಹಮ್ಮಿಕೊಂಡಿದ್ದು,
ಸುಮಾರು 25 ಸಾವಿರ ವಾಹನಗಳು ಪರೇಡ್ ನಲ್ಲಿ ಭಾಗವಹಿಸಲಿವೆ. ಪರೇಡ್ ನಡೆಸುವುದಕ್ಕೆ ಪೊಲೀಸರ ಅನುಮತಿ ಕೋರಲಾಗಿದೆ. ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
key words : Republic Day-Parade-25 thousand-vehicles-Farmer leader-Kurubur Shantakumar