ಮೈಸೂರು,ಜುಲೈ,9,2021(www.justkannada.in): ಕೊರೋನಾ ಲಾಕ್ ಡೌನ್ ಹಿನ್ನೆಲೆ ಮುಂದೂಡಿಕೆಯಾಗಿದ್ಧ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ.ಸೆಟ್)ಗೆ ದಿನಾಂಕ ಮರುನಿಗದಿ ಮಾಡಲಾಗಿದೆ.
ಜುಲೈ 25 ರಂದು ಕೆ-ಸೆಟ್ ಪರೀಕ್ಷೆ ನಡೆಯಲಿದ್ದು ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಣೆ ಹೊರಡಿಸಿದೆ. ಈ ಮೊದಲು ಏಪ್ರಿಲ್ 11ರಂದು ಕೆ- ಸೆಟ್ ಪರೀಕ್ಷೆ ನಡೆಸಲು ಆಯೋಜಿಸಲಾಗಿತ್ತು. ಆದರೆ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆ ಎರಡನೇ ಹಂತದ ಲಾಕ್ಡೌನ್ ಘೋಷಣೆ ಮಾಡಲಾಯಿತು. ಹೀಗಾಗಿ ಕೆ-ಸೆಟ್ ಪರೀಕ್ಷೆಯನ್ನು ಮುಂದೂಡಿ ಮೈಸೂರು ವಿಶ್ವವಿದ್ಯಾಲಯವು ಆದೇಶ ಹೊರಡಿಸಿತ್ತು.
ಈಗ ಮತ್ತೆ ದಿನಾಂಕವನ್ನು ನಿಗದಿ ಮಾಡಿ ಮೈಸೂರು ವಿವಿ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ವೆಬ್ ಸೈಟನ್ನು ಸಂಪರ್ಕಿಸಬಹುದು : http://kset.uni-mysore.ac.in/
ENGLISH SUMMARY….
Date fixed for the K-SET Exams which was postponed earlier
Mysuru, July 9, 2021 (www.justkannada.in): The date to conduct the Karnataka State Eligibility Test (K-SET) which was earlier postponed, due to lockdown has been rescheduled.
The University of Mysore has issued a circular mentioning that the K-SET exams will be held on July 25, 2021. Earlier, it was scheduled for April 11. But, it was postponed following an increase in the number of Coronavirus cases, and announcement of lockdown by the State Government.
The UoM has announced the date now. For more details, you can visit the website: http://kset.uni-mysore.ac.in/
Keywords: University of Mysore/ K-SET/ exam date fixed/ rescheduled
Key words: Reschedule -date – postponed -K-set -exam