ಮೈಸೂರು,ಜೂನ್,17,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕೋಲ್ಕತ್ತಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ಯೊಂದಿಗೆ ಶುಕ್ರವಾರ ನಡೆದ ಒಡಂಬಡಿಕೆಗೆ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಹಿ ಹಾಕಿದರು.
ನಂತರ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯವು ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ವಿಶ್ವ ದರ್ಜೆಯ ಸಂಶೋಧನಾ ಸಂಸ್ಥೆಗಳೊಂದಿಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೋಲ್ಕತ್ತಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ಯೊಂದಿಗೆ ಮಾಡಿಕೊಂಡು ಈ ಒಪ್ಪಂದ ಐತಿಹಾಸಿಕವಾಗಿದೆ. ಈ ಸಂಸ್ಥೆಯನ್ನು 2007 ರಲ್ಲಿ ಭಾರತ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಒಡಂಬಡಿಕೆ 5 ವರ್ಷಗಳ ಅವಧಿವರೆಗೆ ಇರುತ್ತದೆ ಎಂದರು.
ಇದರಲ್ಲಿ ಎರಡೂ ಸಂಸ್ಥೆಗಳಲ್ಲಿನ ಸಂಶೋಧನಾ ಚಟುವಟಿಕೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಲಾಗುತ್ತದೆ. ಸಹಕಾರಿ ಸಂಶೋಧನಾ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮಗಳು, ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳು, ಸಲಕರಣೆ ಸೌಲಭ್ಯಗಳ ಹಂಚಿಕೆ ಮತ್ತು ಜಂಟಿ ಸಂಶೋಧನಾ ಯೋಜನೆಗಳ ಸಲ್ಲಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶಗಳನ್ನು ಒಳಗೊಂಡಿದೆ. ಈ ಒಡಂಬಡಿಕೆ ಹಿಂದೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಪಾತ್ರ ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಭಾಗವಹಿಸುವ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉನ್ನತೀಕರಿಸುತ್ತದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮತ್ತು ಲಕ್ನೋದ ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ತಪಸ್ ಕುಂದು ಈ ಎರಡು ಸಂಸ್ಥೆಗಳನ್ನು ಒಪ್ಪಂದದಡಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೊ. ಅರುಣ್ ಬಂಡೋಪಾಧ್ಯಾಯ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ, ಜಾದವ್ಪರ, ಕೋಲ್ಕತ್ತಾದ ನಿರ್ದೇಶಕ) ಮತ್ತು ಡಾ. ಗೋಪಾಲನ್ (ಹೈದರಾಬಾದ್ ನ ಪ್ರಸಿದ್ಧ ಫಾರ್ಮಾ ಕೈಗಾರಿಕೋದ್ಯಮಿ) , ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ಪ್ರೊ.ಎನ್.ಕೆ.ಲೋಕನಾಥ್, ಡಾ.ಎಸ್.ಚಂದ್ರನಾಯಕ್, ಡಾ.ಸಿ.ಡಿ.ಮೋಹನ್ ಮತ್ತು ಇತರ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
Key words: Research-agreement -Mysore university- Kolkata.
ENGLISH SUMMARY…
The University of Mysore signs research MoU with the National Institute of Pharmaceutical Education and Research of Kolkata
Mysuru, June 17, 2022 (www.justkannada.in): Prof. G. Hemanth Kumar, Vice-Chancellor, University of Mysore, signed an MoU with the National Institute of Pharmaceutical Education and Research of Kolkata on Friday.
Speaking on the occasion, he said, “I feel proud to say that the University of Mysore is entering into MoUs with several reputed research centers of the world in recent years. This MoU with the National Institute of Pharmaceutical Education and Research is historic. This institute is established under the Ministry of Chemicals and Fertilizers, Government of India. This MoU is for a 5-year term.”
“Both the institutions will work together in relevant research works. Organizing cooperative research programs, conducting student training programs, exchange of Professors programs, distributing tools and facilities, and undertaking joint research programs are the objectives. The role of former Vice-Chancellor of the University of Mysore Prof. K.S. Rangappa is vital behind this MoU. It will help the institutes that will take part in the future and upgrade the research activities,” he explained.
Former VC Prof. K.S. Rangappa and Lucknow Central Pharmaceutical Research Institute’s former Director Prof. Tapas Kundu have played a vital role in bringing both these institutions closer through this MoU, he added.
Prof. Arun Bandopadhyaya (Indian Institute of Chemical Biology, Jadappar, Kolkata Director) and Dr. Gopalan (Hyderabad’s famous Pharma entrepreneur), Prof. R. Shivappa, Registrar, University of Mysore, Prof. N.K. Loknath, Dr. S. Chandranayak, Dr. C.D. MOhan, and other teaching staff were present in the program.
Keywords: University of Mysore/ MoU