ಬೆಂಗಳೂರು,ಡಿ,28,2019(www.justkannada.in): ದೇಶದಲ್ಲಿ ನಡೆಯುವ ಎಲ್ಲಾ ಸಂಶೋಧನೆಗಳು ತಿಳುವಳಿಕೆ ಹೆಚ್ಚಿಸುವ ನಿಟ್ಟುನಲ್ಲಿರಬೇಕೇ ಹೊರತು ಮೆಚ್ಚುಗೆಯ ಸಂಶೋಧನೆ ಆಗಬಾರದು ಎಂದು ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರತಿಷ್ಠಿತ ಕಮ್ಯುನಿಟಿ ಸೆಂಟರ್ ಆಫ್ ಎಜ್ಯುಕೇಷನ್ ಇನ್ಸ್ಟಿಟ್ಯೂಟ್ ನ ವಜ್ರಮಹೋತ್ಸವ ಕಾರ್ಯಕ್ರಮವನ್ನ ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ ಉದ್ಘಾಟಿಸಿದರು. ಸಮಾರಂಭದಲ್ಲಿ ಶಾಸಕರು ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ , ವಿಧಾನಪರಿಷತ್ ಸದಸ್ಯರೂ ಮತ್ತು ಲೋಕಶಿಕ್ಷಣ ಟ್ರಸ್ಟ್ ನ ಛೇರಮನ್ ರಾದ ಯು.ಬಿ.ವೆಂಕಟೇಶ್ , ಬಿಬಿಎಂಪಿ ಸದಸ್ಯರಾದ ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಮಲ್ಲಿಕಾರ್ಜುನ ಮತ್ತು ಸಂಸ್ಥೆಯ ಅಧ್ಯಕ್ಷರಾದ ಕೆ.ಎಂ.ನಾಗರಾಜ್ ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಸರಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜ್ಞಾನ ಶಿಕ್ಷಣದಿಂದ ಲಭ್ಯವಾಗುತ್ತದೆಯೋ ಹೊರತು ವ್ಯಕ್ತಿ ಆರಾಧನೆಯಿಂದ ಬರಲ್ಲ. ವಿಶ್ವದಲ್ಲಿ ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ. ಪ್ರಪಂಚದಾದ್ಯಂತ ನಡೆಯುವ ಸಂಶೋಧನೆ ಗಳು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇರಲಿ. ಯಾರದೋ ವ್ಯಕ್ತಿಯನ್ನು ಮೆಚ್ಚಿಸುವ ರೀತಿಯಲ್ಲಿ ಇರಬಾರದು. ತಿಳುವಳಿಕೆಯನ್ನು ಹೆಚ್ಚಿಸುವ ಸಂಶೋಧನೆಗಳಿಗೆ ಶಿಕ್ಷಣ ಸಂಸ್ಥೆಗಳು ಸಹಾಯ ಮಾಡಬೇಕು ಎಂದು ಹೇಳಿದರು.
ಸಮಸ್ಯೆ ಪರಿಹಾರಕ್ಕೆ ಸರಳ ಸ್ವರೂಪದ ಶಿಕ್ಷಣ ನೀಡಬೇಕು. ಶಿಕ್ಷಣ ಕೇವಲ ಡಿಗ್ರಿಗೆ ಮಾತ್ರ ಸೀಮಿತವಾಗಬಾರದು. ಈ ದಾರಿಯಲ್ಲಿ ನಡೆಯೋ ಕೆಲಸವನ್ನು ಕಮ್ಯುನಿಟಿ ಸೆಂಟರ್ ಮಾಡ್ತಿದೆ. ಪ್ರತಿಯೊಬ್ಬರ ಬದುಕು ರೂಪಿಸಲು ಶಿಕ್ಷಣ ನೆರವಾಗಲಿ. ಪ್ರತಿಯೊಬ್ಬರ ಭಾವನೆಗಳಿಗೆ ಪೂರಕವಾದ ಶಿಕ್ಷಣ ಲಭ್ಯವಾಗುವಂತೆ ಮಾಡೋಣ. ಒಂದು ಸರ್ಕಾರವಾಗಿ ನಮ್ಮ ಪ್ರಯತ್ನ ನಾವು ಮಾಡ್ತೇವೆ. ಇದಕ್ಕೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಲಿ. ಶಾಂತಿ, ನೆಮ್ಮದಿ, ಸಮಾಧಾನ ಕೊಡುವ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಕಮ್ಯುನಿಟಿ ಸೆಂಟರ್ ಆಫ್ ಎಜುಕೇಷನ್ ಇನ್ಸ್ಟಿಟ್ಯೂಟ್ ಮಾಡ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ ಅಶ್ವಥ್ ನಾರಾಯಣ್ ಹೇಳಿದರು.
Key words: Research- enhancing- understanding – DCM- Ashwath Narayan.