ಬಾಗಲಕೋಟೆ,ಜನವರಿ,13,2021(www.justkannada.in): ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಾಳೆ (ಜನವರಿ 14) ನಡೆಯಲಿರುವ ಪಾದಯಾತ್ರೆ ರದ್ದಾಗಿಲ್ಲ. ಇಂದು ಸಂಜೆಯೊಳಗೆ ಮೀಸಲಾತಿ ಘೋಷಿಸಿದರೇ ಮಾತ್ರ ಪಾದಯಾತ್ರೆ ವಾಪಸ್ ತೆಗೆದುಕೊಳ್ಳಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ, ಪಂಚಮಸಾಲಿ ಪೀಠದಿಂದ ನಡೆಯುವ ಪಾದಯಾತ್ರೆ ರದ್ಧಾಗಿದೆ ಎಂಬ ಸುದ್ದಿ ಹರಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಯಲಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನ ಹಿಂದಿಡುವ ಮಾತೇ ಇಲ್ಲ ಎಂದರು.
ಹಾಗೆಯೇ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಂಜೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿ. ಇಲ್ಲದಿದ್ದರೇ ನಾಳೆ ಪಾದಯಾತ್ರೆ ನಡೆಯಲಿದ್ದು 2 ಲಕ್ಷ ಜನ ಸೇರಲಿದ್ದಾರೆ ಎಂದು ಹೇಳಿದರು.
Key words: reservation –panchamasali-padayatre- Basava Jayamritunjaya Swamiji.