ಮೈಸೂರು,ಜನವರಿ,14,2021(www.justkannada.in): ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಚುನಾವಣೆ ಮುಗಿದಿದ್ದು, ಮೈಸೂರು ಜಿಲ್ಲೆಯಲ್ಲಿ ನಾಳೆಯಿಂದ ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ಗಾದಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ.
ಮೈಸೂರು ಜಿಲ್ಲೆಯ ಎಂಟು ತಾಲ್ಲೂಕಿನ 250 ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ. ಮೊದಲ 30 ತಿಂಗಳ ಅವಧಿಗಾಗಿ ಜಿಲ್ಲಾಧಿಕಾರಿ, ಮೀಸಲಾತಿ ನಿಗದಿಗೊಳಿಸಲಿದ್ದು, ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಪ್ರಕ್ರಿಯೆ ನಡೆಯಲಿದೆ.
ಜನವರಿ 15ರಂದು ತಿ.ನರಸೀಪುರ, ನಂಜನಗೂಡು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಪಡಿಸಲಾಗುತ್ತದೆ. ಜನವರಿ 16ರಂದು ಮೈಸೂರು, ಕೆ.ಆರ್.ನಗರ, ಜನವರಿ18ರಂದು ಎಚ್.ಡಿ.ಕೋಟೆ, ಸರಗೂರು, ಜನವರಿ 19ರಂದು ಹುಣಸೂರು, ಪಿರಿಯಾಪಟ್ಟಣ ತಾಲೂಕಿನಲ್ಲಿ ಮಿಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ. 8 ಬಾರಿಯ ಮೀಸಲಾತಿ ಪರಿಗಣಿಸಿ ಪ್ರಸಕ್ತ ಮೀಸಲಾತಿ ಪಟ್ಟಿ ತಯಾರಿ ಮಾಡಲಿದ್ದಾರೆ.
English summary…..
Process of giving reservations for GP President and Vice-President posts to begin from tomorrow
Mysuru, Jan. 14, 2021 (www.justkannada.in): Elections for Gram Panchayats have finished and the process of making reservations for the GP President and Vice-President posts will begin from tomorrow in Mysuru District.
The process of reservations for 250 GP President and Vice-President posts will be held in eight taluks of Mysuru District, in the presence of the Deputy Commissioner. The Deputy Commissioner will decide the reservations for the first 30 months duration and the process will be held in the respective taluk centres.
While the reservations for the GPs in T.Narasipura and Nanjangud will be held on January 15, the process in Mysuru, K.R. Nagara, will be held on Jan. 16 and H.D.Kote, Sarguru on Jan. 18, Hunasuru, Periyapatna taluks in on Jan. 19. The reservation process will be conducted based on considering the reservations in the last 8 terms.
Keywords: GP President and Vice-President posts reservation/ Mysuru District/ eight taluks
Key words: reservation-process –gramapanchayath- President-Vice-President-begin-tomorrow.