ಮೈಸೂರು, ಜೂನ್ 19, 2022 (www.justkannada.in): ಮೀಸಲಾತಿ ಪ್ರಕಟ ವಿಳಂಬದಿಂದಾಗಿ ಮೈಸೂರಿಗೆ ನೂತನ ಮೇಯರ್ ಭಾಗ್ಯ ಸಿಗದಂತಾಗಿದೆ.
ಮೀಸಲಾತಿ ಪ್ರಕಟಿಸಲು ಹಲವು ಕಾರಣಗಳಿಂದ ಸರ್ಕಾರ ತಡಮಾಗುತ್ತಿದೆ. ಹೀಗಾಗಿ ಅವಧಿ ಮುಕ್ತಾಯಗೊಂಡು 4ತಿಂಗಳಾದರೂ ಚುನಾವಣೆ ನಡೆದಿಲ್ಲ.
ದಕ್ಷಿಣ ಪದವೀಧರ ಚುನಾವಣೆಯು ಮುಕ್ತಾಯವಾಗಿ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡಿದ್ದರೂ ಸರಕಾರ ಮೀಸಲಾತಿ ಪ್ರಕಟಿಸಿಲ್ಲ. ಹೀಗಾಗಿ ಅವಧಿ ಮುಗಿದಿದ್ದರೂ ಹಂಗಾಮಿ ಮೇಯರ್ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಬಿಜೆಯಿಂದಲೇ ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಸರ್ಕಾರದಿಂದ ಕಾನೂನು ದುರ್ಬಳಕೆಯಾಗುತ್ತಿದೆ ಎಂದು ಪ್ರತಿ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.
ಹಂಗಾಮಿ ಮೇಯರ್ ಆಗಿ ಸುನಂದಾ ಪಾಲನೇತ್ರ ಮುಂದುವರಿದಿದ್ದಾರೆ. ಸರಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಪ್ರತಿ ಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮದೇ ಪಕ್ಷ ಮೊದಲ ಬಾರಿಗೆ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಅವಧಿ ಮುಗಿಸಲು ಸರಕಾರಕ್ಕೆ ಮನಸ್ಸಿಲ್ಲ ಎಂದು ಪ್ರತಿ ಪಕ್ಷ ಸದಸ್ಯರು ದೂರಿದ್ದಾರೆ.