ನವದೆಹಲಿ,ಅ,25,2019(www.justkannada.in): ರಾಜೀನಾಮೆ ಕೊಟ್ಟ ಶಾಸಕರು ಅವರ ಕ್ಷೇತ್ರಗಳಿಗೆ ಹೋಗಬೇಕಿತ್ತು. ಮುಂಬೈಗಲ್ಲ. ರಾಜೀನಾಮೆ ನೀಡುವ ಮೊದಲು ಕ್ಷೇತ್ರದ ಜನತೆ ಜತೆ ಮಾತನಾಡಬೇಕಿತ್ತು ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದರು.
ಸುಪ್ರೀಂಕೋರ್ಟ್ ನಲ್ಲಿ ಕಾಂಗ್ರೆಸ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೆ ಅವಕಾಶ ನೀಡಬೇಡಿ. ಚುನಾವಣೆಗೆ ಸ್ಪರ್ಧಿಸುವುದಾದರೇ ಅನರ್ಹತೆಯ ಅವಶ್ಯಕತೆ ಏನಿದೆ..? ಹೀಗಾಗಿ ಅವಕಾಶ ನೀಡಬಾರದು. ಎಲ್ಲರೂ ಒಟ್ಟಾಗಿ ಹೋಗಿ ರಾಜೀನಾಮೆ ಕೊಟ್ಟಿದ್ದಾರೆ ನಂತರ ಬಿಜೆಪಿ ನಾಯಕರ ಜತೆ ಗುರುತಿಸಿಕೊಂಡಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಸಮ್ಮಿಶ್ರ ಸರ್ಕಾರವನ್ನ ಬೀಳಿಸುವುದೇ ಅವರ ಉದ್ದೇಶವಾಗಿತ್ತು. ರಾಜೀನಾಮೆ ಸ್ವಯಂಪ್ರೇರಿತವಾಗಿಲ್ಲ ಎಂದು ಹೇಳಿದರು.
ಅನರ್ಹಗೊಳಿಸಲು ಸ್ಪೀಕರ್ ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಆದರೇ ಇವರು ವಿಪ್ ಉಲ್ಲಂಘಿಸಿದ್ದೇಕೆ. ಮುಂಬೈಗೆ ಹೋಗಿ ಹೋಟೆಲ್ ನಲ್ಲಿ ಅವಿತು ಕುಳಿತಿದ್ದೇಕೆ..? ಬಿಜೆಪಿ ನಾಯಕರ ಜತೆ ಗುರುತಿಸಿಕೊಂಡಿದ್ದೇಕೆ..? ಇದೆಲ್ಲವೂ ನೋಡಿದರೇ ಸಮ್ಮಿಶ್ರ ಸರ್ಕಾರ ಪತನಗೊಳಿಸುವುದು ಇವರ ಉದ್ದೇಶವಾಗಿತ್ತು. ಹೀಗಿರುವಾಗ ರಾಜೀನಾಮೆ ನೈಜತೆಯಿಂದ ಕೂಡಿದೆ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದೀಗ ಕಪಿಲ್ ಸಿಬಲ್ ವಾದ ಮಂಡನೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಪರ ದೇವದತ್ ಕಾಮತ್ ವಾದ ಮಂಡಿಸುತ್ತಿದ್ದಾರೆ.
Key words: resign – his constituencies Not Mumbai-Advocate- Kapil Sibal -argues – Supreme Court