ನವದೆಹಲಿ,ಜುಲೈ,17,2021(www.justkannada.in): ಸಿಎಂ ಸ್ಥಾನಕ್ಕೆ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಿಂದಲೇ ವಿರೋಧಿ ಬಣಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಸಂದೇಶ ರವಾನಿಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನನಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜೀನಾಮೆ ಮಾತೇ ಶುದ್ಧ ಸುಳ್ಳು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋ ಪ್ರಶ್ನೆಯೇ ಇಲ್ಲ. ಆಗಸ್ಟ್ ಮೊದಲವಾರದಲ್ಲಿ ಮತ್ತೆ ದೆಹಲಿಗೆ ಬರಲಿದ್ದೇನೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.
ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಆಗಸ್ಟ್ ಮೊದಲ ವಾರ ಮತ್ತೆ ದೆಹಲಿಗೆ ಆಗಮಿಸಿ ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಹಿರಿಯ ಸಚಿವರ ಜತೆ ಚರ್ಚೆ ನಡೆಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಮೇಕೆದಾಟು ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿಪಡಿಸುವುದು ಸರಿಯಲ್ಲ. ಈ ಯೋಜನೆ ಜಾರಿಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಿಲ್ಲ. ಈ ಬಗ್ಗೆ ಸಂಬಂಧ ಪಟ್ಟವರಿಗೆ ಮನವರಿಕೆ ಮಾಡಿ ಯೋಜನೆ ಆದಷ್ಟು ಶೀಘ್ರ ಆರಂಭಿಸುತ್ತೇವೆ. ಎರಡೂ ರಾಜ್ಯ ಗಳು ಸಹೋದರರಂತೆ ನಡೆದುಕೊಳ್ಳಬೇಕೆಂಬುದು ನನ್ನ ಆಶಯವಾಗಿದೆ.ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದರು.
ENGLISH SUMMARY…
Resignation for the post of CM: BSY sends strong message to the opposing faction from New Delhi
New Delhi, July 17, 2021 (www.justkannada.in): Chief Minister B.S. Yedyurappa has sent a strong message from New Delhi to the people of his own party in the State who are opposing him.
“There is no question of resigning me as the Chief Minister. The high command has not asked me to resign. All t his rumors are rubbish. I will come to New Delhi again in the first week of August to meet the BJP national leaders,” he informed speaking in Delhi.
“There is no need to answer to the rumors. I will visit Delhi again in the month of August to discuss various developmental issues with the leaders,” he added.
In his response to the Mekedatu project, BSY said, “It is not correct on the part of Tamil Nadu to oppose the project. This project won’t affect Tamil Nadu in any way. We will try to explain this and convince the people concerned and commence the works as soon as possible. I wish people of both states should behave like brothers. I will make all required efforts for this.”
Keywords: Chief Minister/ Karnataka/ B S Yedyurappa/ no resignation/ high command/ BJP/ national leaders/ Mekedatu/ project
Key words: Resignation –CM position-CM BS Yeddyurappa -clearify