ಬೆಂಗಳೂರು,ಏಪ್ರಿಲ್,11,2023(www.justkannada.in): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಮಾನಹಾನಿಕರ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ನೀಡಿದ್ದ ತಡೆಯನ್ನ ಹೈಕೋರ್ಟ್ ತೆರವುಗೊಳಿಸಿದೆ.
ಬೆಂಗಳೂರು ಸಿವಿಲ್ ನ್ಯಾಯಾಲಯ ರೋಹಿಣಿ ಸಿಂಧೂರಿ ಹಾಕಿದ ಅರ್ಜಿಯ ಮೇಲೆ, ಡಿ. ರೂಪಾ ಹಾಗೂ ಇತರರ ವಿರುದ್ಧ ಏಕ ಪಕ್ಷಿಯ ಪ್ರತಿಬಂಧಕ ಆದೇಶ ನೀಡಿತ್ತು. ಈ ಸಂಬಂಧ ಡಿ. ರೂಪಾ ಅವರು ಸಿವಿಲ್ ನ್ಯಾಯಲಯದ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ಕರ್ನಾಟಕ ಉಚ್ಚ ನ್ಯಾಯಾಲಯ ಡಿ. ರೂಪಾರವರ ರಿಟ್ ಅರ್ಜಿ ಪುರಸ್ಕರಿಸಿ, ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ತಮ್ಮ ವಾದವನ್ನು ಆಲಿಸದೇ ನೀಡಿರುವ ಆದೇಶವನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ಡಿ.ರೂಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ. ಈ ಆದೇಶದಿಂದ ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವಾದಂತಾಗಿದೆ.
Key words: Restraining -order –against- Rohini Sindhuri- IPS officer -Roopa