ಗದಗ,ಮಾರ್ಚ್,23,2022(www.justkannada.in): ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳಲ್ಲಿ ನಿರ್ಬಂಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಆದರೆ ಎಲ್ಲ ಸಮುದಾಯದವರು ಒಟ್ಟಿಗೆ ಇರಬೇಕು. ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂಬುದು ಎಲ್ಲರ ಅಪೇಕ್ಷೆ ಎಂದು ತಿಳಿಸಿದ್ದಾರೆ.
ಈ ಕುರಿತು ಗದಗದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಹಿಜಾಬ್ ಬಗ್ಗೆ ಹೈಕೋರ್ಟ್ ಆದೇಶ ನೀಡಿತ್ತು ಕೋರ್ಟ್ ಆದೇಶ ವಿರೋಧೀಸಿ ಬಂದ್ ಮಾಡಿದ್ರು ಈ ರೀತಿಯ ಚಟುವಟಿಕೆಗಳನ್ನ ಯಾರೂ ಒಪ್ಪಲ್ಲ. ಹೈಕೋರ್ಟ್ ಆದೇಶದ ಬಳಿಕ ಅವರ ಚಟುವಟಿಕೆಗಳನ್ನು ಯಾರೂ ಒಪ್ಪುವಂತದ್ದಲ್ಲ. ಅದನ್ನು ನೋಡಿಯೂ ಕಣ್ಣು ಮುಚ್ಚಿಕೊಂಡು ಕೂರಲು ಸಾಧ್ಯವೂ ಇಲ್ಲ. ಎಲ್ಲರೂ ಸಮಾದಾನದಿಂದ ಕುಳಿತು ಚರ್ಚಿಸಬೇಕಿದೆ ಎಂದರು.
ಹಿಜಾಬ್ ನಂತರದ ಬೆಳವಣಿಗೆಗಳು ಯಾರಿಗೂ ಶೋಭೆ ತರುವಂತದ್ದಲ್ಲ, ಕಾಂಗ್ರೆಸ್ ನಾಯಕರ ನಡುವಳಿಕೆಯಿಂದಲೇ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಪಕ್ಷ ನನಗೆ ರಾಜ್ಯದ ಉಪಾಧ್ಯಕ್ಷ ಸ್ಥಾನ ನೀಡಿದೆ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: Restrictions-Muslim- traders- BY Vijayendra