ಮೈಸೂರು,ಜು,11,2020(www.justkannada.in): ಬೆಂಗಳೂರು ಟ್ರಾವೆಲ್ ಹಿಸ್ಟರಿ ಇದ್ದವರಿಗೆ ಕೊರೋನಾ ಸೋಂಕು ಬರುತ್ತಿರುವುದು ನಿಜ. ಆದರೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣಕ್ಕೆ ನಿರ್ಬಂಧ ಸದ್ಯಕ್ಕಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರಿನಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿಯೂ ಚರ್ಚೆ ಮಾಡಿದ್ದೇವೆ. ಅಂತರ ರಾಜ್ಯ ಹಾಗೂ ಜಿಲ್ಲೆಯವರಿಗೆ ನಿರ್ಭಂದ ವಿಧಿಸುವ ಕುರಿತು ಚರ್ಚೆ ಮಾಡುತ್ತಿದ್ದೇವೆ. ಕೆಲವೆ ದಿನಗಳ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದರು.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಸಚಿವರು, ಶಾಸಕರು ಕಟಿಬದ್ದರಾಗಿದ್ದಾರೆ. ನನಗೆ 8 ವಲಯಗಳ ಉಸ್ತುವಾರಿ ನೀಡಿದ್ದಾರೆ. ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಬೆಂಗಳೂರು ಟ್ರಾವೆಲ್ ಹಿಸ್ಟರಿ ಇದ್ದವರಿಗೆ ಕೊರೊನಾ ಸೋಂಕು ಬರುತ್ತಿರುವುದು ನಿಜ. ಹೀಗಾಗಿ ಬೆಂಗಳೂರು-ಮೈಸೂರು ನಡುವೆ ಪ್ರಯಾಣ ನಿರ್ಬಂಧ ಮಾಡಬೇಕು ಎಂಬ ವಿಚಾರ ಚರ್ಚೆಗೆ ಬಂದಿದೆ. ಆದರೆ ಪ್ರಯಾಣ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಬೆಂಗಳೂರು-ಮೈಸೂರು ನಡುವಿನ ಪ್ರಯಾಣಕ್ಕೆ ನಿರ್ಬಂಧ ಸದ್ಯಕ್ಕಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.
ಪ್ರಾರಂಭದಲ್ಲಿ ಹೊರಗಿನಿಂದ ಬೆಂಗಳೂರಿಗೆ ಬರಬೇಡಿ ಎಂಬ ಸನ್ನಿವೇಶ ಇತ್ತು. ಈಗ ಬೆಂಗಳೂರಿನಿಂದ ಬೇರೆ ಕಡೆ ಬರಬೇಡಿ ಎಂಬ ಸ್ಥಿತಿ ಎದುರಾಗಿದೆ ಎಂದು ಸಚಿವ ಸೋಮಶೇಖರ್ ಆತಂಕ ವ್ಯಕ್ತಪಡಿಸಿದರು.
Key words: Restrictions – travel-between -Bangalore – Mysore-Minister- ST Somashekhar