ಬೆಂಗಳೂರು, ಆಗಸ್ಟ್ 07, 2022 (www.justkannada.in): ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಪುನಾರಚಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರದ ನೀತಿ ಆಯೋಗ ಮಾದರಿಯಲ್ಲಿ ಆಯೋಗವನ್ನು ‘ರಾಜ್ಯ ಪರಿವರ್ತನಾ ಸಂಸ್ಥೆ’ (ಎಸ್ಐಟಿಕೆ) ಎಂದು ಪುನಾರಚಿಸಲಾಗಿದೆ.
ಈ ಸಂಸ್ಥೆಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಯೋಜನೆ ಹಾಗೂ ಸಂಬಂಧಿತ ವಿಷಯಗಳಲ್ಲಿ ಪರಿಣಿತರಾದವರನ್ನು ಉಪಾಧ್ಯಕ್ಷರನ್ನಾಗಿ ಸರ್ಕಾರ ನೇಮಿಸಲಿದೆ.
ನೀತಿ ಆಯೋಗ ಮಾದರಿಯಲ್ಲಿ ಸುಸ್ಥಿರ ಅಭಿವೃದ್ಧಿ-2030 ಹಾಗೂ 2047ಕ್ಕೆ ಭಾರತ ಗುರಿಗಳ ಮೇಲೆ ಈ ಸಂಸ್ಥೆ ಗಮನವಿರಿಸಲಿದೆ. ಪ್ರಮುಖ ಎರಡು ಗುರಿಗಳಿಗೆ ಹೊಂದಿಕೊಂಡು ರಾಜ್ಯದ ಯೋಜನೆಗಳನ್ನು ರೂಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ.
ಈ ಸಂಸ್ಥೆಯಲ್ಲಿ ಅಧ್ಯಕ್ಷ- ಮುಖ್ಯಮಂತ್ರಿ, ಉಪಾಧ್ಯಕ್ಷ- ಸರ್ಕಾರದಿಂದ ನೇಮಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ- ಯೋಜನಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಸೇರಿದಂತೆ ವಿಶೇಷ ಆಹ್ವಾನಿತರು ಇರಲಿದ್ಧಾರೆ.