ಮೈಸೂರು ವಿವಿಯ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ ಫಲಿತಾಂಶ: ಮರು ಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ…

ಮೈಸೂರು,ಫೆಬ್ರವರಿ,3,2021(www.justkannada.in): 2020ರ ನವೆಂಬರ್ ನಲ್ಲಿ ನಡೆದ  ಮೈಸೂರು ವಿಶ್ವ ವಿದ್ಯಾನಿಲಯದ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು ಈ ಮಧ್ಯೆ ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.jk

ನವೆಂಬರ್  ನಡೆದ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ ಫಲಿತಾಂಶವು 29-01-2021ರಂದು ಪ್ರಕಟಗೊಂಡಿತ್ತು. ಈ ಮಧ್ಯೆ ಪಿಹೆಚ್ ಡಿ ಪ್ರವೇಶ ಪರೀಕ್ಷೆಯಲ್ಲಿ  ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಯ ಭಾಗ-ಬಿ ಯ ಮರು ಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್ http://uni-mysore.ac.in ನಲ್ಲಿ ದಿನಾಂಕ 04/02/2021ರಿಂದ 12/022021 ರ ಸಂಜೆ 5.30ರೊಳಗೆ ನಿಗದಿ ಪಡಿಸಿದ ಶುಲ್ಕ ರೂ750/- ಅನ್ನು DD/F&R Challanನಲ್ಲಿ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.Result - Mysore University-PhD- Admission exam-re-evaluation.

ಸಲ್ಲಿಸಿದ ಅರ್ಜಿಯ ನಕಲು ಪ್ರತಿಯನ್ನು ಸಂಯೋಜನಾಧಿಕಾರಿ ಪಿಹೆಚ್.ಡಿ ಪ್ರವೇಶ ಪರೀಕ್ಷಾ ವಿಭಾಗ, ಪರೀಕ್ಷಾ ಭವನ, ವಿಶ್ವವಿದ್ಯಾಲಯ, ಮೈಸೂರು ಈ ವಿಭಾಗಕ್ಕೆ ಸಲ್ಲಿಸಲು ತಿಳಿಸಲಾಗಿದೆ ಎಂದು  ಮೈಸೂರು ವಿವಿಯ ಪರಿಕ್ಷಾಂಗ ಕುಲಸಚಿವ ಎ.ಪಿ.ಜ್ಞಾನ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ENGLISH SUMMARY…

UoM Ph.D Entrance Exam Results: Applications for revaluation invited
Mysuru, Feb. 3, 2021 (www.justkannada.in): The results of the Ph.D entrance exams conducted by the University of Mysore in the month of November 2020 has already been announced. Meanwhile, applications for revaluation have been invited from candidates who have failed.
The results of the Ph.D entrance exams were announced on 29.01.2021 and revaluation applications for Part-B of the question paper has been invited from the candidates who have failed.
Candidates who want to apply can visit the University website http://uni-mysore.ac.in and submit applications from 04.02.2021 and 12.02.2021, within 5.30 pm, by paying a sum of Rs. 750 fee through DD/F&R Challan.
A copy of the receipt of the fee paid should be sent to the Coordinating Officer, Ph.D Entrance Exam Division, Examination Bhavan, University of Mysore, according to a press release issued by Sri A.P.Jnanaprakash, Registrar (Exams), University of Mysore.
Keywords: UoM Ph.D Entrance Exam results/ applications invited for revaluation

Key words: Result – Mysore University-PhD- Admission exam-re-evaluation.