ಬೆಂಗಳೂರು, ಜುಲೈ 22, 2022 (www.justkannada.in): ಬೆಂಗಳೂರು ವಿಶ್ವವಿದ್ಯಾಲಯ ಪದವಿ ಓದುತ್ತಿರುವ ಓರ್ವ ವಿದ್ಯಾರ್ಥಿಯ ಫಲಿತಾಂಶವನ್ನು ಎರಡು ಬಾರಿ ಘೋಷಿಸುವ ಮೂಲಕ ಮತ್ತೊಮ್ಮೆ ಶಾಕ್ ನೀಡಿದೆ. ಮೊದಲಿಗೆ, ಆಕೆಗೆ ಫಲಿತಾಂಶದ ಬಗ್ಗೆ ತಿಳಿಸಿತು, ಆದರೆ ನಂತರದಲ್ಲಿ ಆಕೆಯ ಫಲಿತಾಂಶವನ್ನು ತಡೆಹಿಡಿಯಲಾಯಿತು.
ರಾಮನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂ.ಕಾಂ. ಓದುತ್ತಿರುವ ವಿದ್ಯಾರ್ಥಿನಿ ಪ್ರಿಯಾಂಕ (ಹೆಸರು ಬದಲಾಯಿಸಲಾಗಿದೆ), ಬಿ.ಕಾಂ. ಪರೀಕ್ಷೆಯ ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ ಎಂಬ ಸುದ್ದಿಯನ್ನು ಕೇಳಿ ಆಘಾತವಾಯಿತು.
“ನಾನು ನನ್ನ ಬಿ.ಕಾಂ. ಅಂಕಪಟ್ಟಿಯನ್ನು ಪಡೆದು, ಆಗಲೇ ಸ್ನಾತಕೋತ್ತರ ಪದವಿಗೆ ಪ್ರವೇಶವನ್ನೂ ಪಡೆದುಕೊಂಡಿದ್ದೇನೆ. ಆದರೆ ನಮ್ಮ ಕಾಲೇಜಿನಿಂದ ಬಿ.ಕಾಂ. ಪದವಿಯ ಫಲಿತಾಂಶ ತಡೆಹಿಡಿಯಲಾಗಿದೆ ಎಂಬ ಮಾಹಿತಿಯನ್ನು ನೋಡಿ ನನಗೆ ಶಾಕ್ ಆಯಿತು. ನಾನು ಈಗಾಗಲೇ ಎಂ.ಕಾಂ. ಮೊದಲ ಸೆಮಿಸ್ಟೆರ್ ನ ಪರೀಕ್ಷೆಯನ್ನೂ ಸಹ ಬರೆದಿದ್ದೇನೆ. ಆದರೆ ಈಗ ನಮ್ಮ ಕಾಲೇಜು ನನ್ನ ಬಿ.ಕಾಂ. ಫಲಿತಾಂಶ ತಡೆಹಿಡಿಯಲಾಗಿದ್ದು, ಅಂಕಪಟ್ಟಿಯನ್ನು ಹಿಂದಿರುಗಿಸುವಂತೆ ಸೂಚಿಸಿದೆ,” ಎಂದು ಪ್ರಿಯಾಂಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಿಯಾಂಕ ಅವರ ಪ್ರಕಾರ ಅವರ ಇನ್ನೂ ಕೆಲವು ಸ್ನೇಹಿತರಿಗೂ ಸಹ ಅವರ ಕಾಲೇಜಿನಿಂದ ಇದೇ ರೀತಿ ಸಂದೇಶಗಳು ತಲುಪಿವೆಯಂತೆ. ಹಾಗಾಗಿ ಕೆಲವು ಸ್ಪಷ್ಟತೆ ಕೋರಿ ಬೆಂಗಳೂರು ವಿಶ್ವವಿದ್ಯಾಲಯದ ಮೊರೆ ಹೋಗಿದ್ದಾರೆ. “ನಾನು ನಿಜವಾಗಿಯೂ ಬಹಳ ಗೊಂದಲ್ಲಿದ್ದು, ನನ್ನ ಭವಿಷ್ಯದ ಬಗ್ಗೆ ಕಾಳಜಿ ಉದ್ಭವಿಸಿದೆ,” ಎಂದರು. ಆದರೆ ಈ ಕುರಿತು ಮಾಹಿತಿ ಹಂಚಿಕೊಳ್ಳಲು ವಿಶ್ವವಿದ್ಯಾಲಯದ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ಬೆಂಗಳೂರು ವಿಶ್ವವಿದ್ಯಾಲಯ ಇದೇ ರೀತಿ ಈ ಹಿಂದೆಯೂ ಸಹ ಕೆಲವು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿಗಳನ್ನು ಸಲ್ಲಿಸಿದ ನಂತರ ಅವರು ಪದವಿ ಪರೀಕ್ಷೆಯಲ್ಲಿ ನಿರುತ್ತೀರ್ಣರಾಗಿರುವುದಾಗಿ ಘೋಷಿಸಿತ್ತು.
ಪದವಿ ಕೋರ್ಸ್ ಗಳ ಫಲಿತಾಂಶಗಳು ಘೋಷಣೆಯಾದಾಗ ಈ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಾಗಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Result -‘twice’- again -Bangalore University!