ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ 5 ದೇಶಗಳ ನಿವೃತ್ತ ಕ್ರಿಕೆಟಿಗರು ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ.
2020 ರ ಫೆಬ್ರವರಿಯಲ್ಲಿ ನಡೆಯಲಿರುವ ರಸ್ತೆ ಸುರಕ್ಷತೆ ವಿಶ್ವ ಟಿ20 ಸರಣಿಯಲ್ಲಿ ಮಾಜಿ ಕ್ರಿಕೆಟಿಗರಾದ ಸಚಿನ್, ಸೆಹ್ವಾಗ್, ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಬ್ರಿಯಾನ್ ಲಾರಾ, ಆಸೀಸ್ ನ ಬ್ರೇಟ್ ಲೀ, ಶ್ರೀಲಂಕಾದ ದಿಲ್ಶನ್, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಈ ಸರಣಿಯಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಈ ಟೂರ್ನಿ ಫೆ. 2 ರಿಂದ 16 ರವರೆಗೆ ನಡೆಯಲಿದ್ದು, ಮಹಾರಾಷ್ಟ್ರ ಸರ್ಕಾರದ ರಸ್ತೆ ಸಾರಿಗೆ ಇಲಾಖೆಯೊಂದಿಗೆ ಕೆಲಸ ಮಾಡುವ ಸಂಸ್ಥೆ ಈ ಟೂರ್ನಿಮೆಂಟ್ ಆಯೋಜಿಸುತ್ತಿದೆ.