ಸೈಕಲ್ಲಿಂಗ್ ಚಾರಣದ ವೇಳೆ ಅವಘಡ : ರಿಚರ್ಡ್ ಬ್ರಾನ್ಸನ್‌ ಗೆ ಗಂಭೀರ ಗಾಯ..!

 

ಮೈಸೂರು, ನ.11, 2021 : (www.justkannada.in news ) ಬ್ರಿಟನ್‌ನ ಸಾಹಸಿ ಪ್ರವೃತ್ತಿಯ ಉದ್ಯಮಿ ರಿಚರ್ಡ್‌ ಬ್ರಾನ್ಸನ್‌ ಸೈಕಲ್ ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಮಾಡಿಕೊಂಡಿದ್ದಾರೆ.

ಬ್ರಿಟಿಷ್ ವರ್ಜಿನ್ ದ್ವೀಪಗಳಾದ್ಯಂತ ದೇಣಿಗೆ ಸಂಗ್ರಹಿಸುವ ಸಲುವಾಗಿ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದ್ದ ರಿಚರ್ಡ್, ಸೈಕಲ್ಲಿಂಗ್ ಚಾರಣಕ್ಕೂ ಮುಂದಾಗಿದ್ದರು. ಈ ವೇಳೆ ಬೆಟ್ಟದಿಂದ ಸೈಕಲ್ ನಲ್ಲಿ ಇಳಿಯುವಾಗ ಈ ಘಟನೆ ಸಂಭವಿಸಿದೆ. ಮೈಮೇಲೆ ಹಲವು ಕಡೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅದೃಷ್ಠವಶಾತ್ ರಿಚರ್ಡ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಖುದ್ದು ರಿಚರ್ಡ್ ಅವರೇ ‘ ದೊಡ್ಡ ಸೈಕಲ್ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವವರ ಕತೆ (ಪುನಃ!)’ ಎಂಬ ತಲೆ ಬರಹದಡಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅವರ ವಿವರ ಹೀಗಿದೆ,..

ಈ ವಾರವಿಡೀ ಬ್ರಿಟಿಷ್ ವರ್ಜಿನ್ ದ್ವೀಪಗಳಾದ್ಯಂತ ದೇಣಿಗೆ ಸಂಗ್ರಹಿಸುವ ಬಹು-ಶಿಸ್ತಿನ ಸವಾಲಿನಲ್ಲಿ ಪಾಲ್ಗೊಂಡಿದ್ದೆ. ಕಳೆದ ಕೆಲವು ವರ್ಷಗಳಲ್ಲಿ ನಾವು, ನನ್ನ ಮಕ್ಕಳಾದ ಹಾಲ್ಲಿ ಹಾಗೂ ಸ್ಯಾಂ ಅವರು ಸ್ಥಾಪಿಸಿರುವ ಶೈಕ್ಷಣಿಕ ಚಾರಿಟಿ ‘ಬಿಗ್ ಚೇಂಜ್’ಗಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದೊಂದಿಗೆ ಕೈಗೊಂಡಿದ್ದAತಹ ಹಲವು ಸವಾಲುಗಳ ಪೈಕಿ ಇದು ಇತ್ತೀಚಿನ ಸವಾಲಾಗಿತ್ತು.
ಮೊದಲ ದಿನ ಅನೆಗಡ ಸುತ್ತಲೂ ದೋಣಿ ವಿಹಾರ, ಕೆಯಾಕಿಂಘ್, ಪ್ಯಾಡಲ್ ಬೋರ್ಡಿಂಗ್‌ನೊAದಿಗೆ ಹಲವು ಚಟುವಟಿಕೆಗಳನ್ನು ಯೋಜಿಸಲಾಗಿದೆ. ಜೊತೆಗೆ ಈ ವಾರ ಚಾರಣ, ಈಜು ಹಾಗೂ ದೋಣಿ ಯಾನಗಳನ್ನೂ ಸಹ ಯೋಜಿಸಲಾಗಿದೆ.
ಎರಡನೆಯ ದಿನ ಸೈಕಲ್ ಸವಾರಿಯ ದಿನವಾಗಿತ್ತು. ಟೊರ್ಟೊಲಾದ ಬೃಹತ್ ಬೆಟ್ಟಗಳ ಸುತ್ತಲೂ ಸುಮಾರು ೬೦ ಕಿ.ಮೀ.ಗಳ ದೂರ ಕ್ರಮಿಸುವುದು ನಮ್ಮ ಗುರಿಯಾಗಿತ್ತು. ಈ ಚಟುವಟಿಕೆ ಬಹಳ ಕಠಿಣವಾಗಿತ್ತು. ಆದರೆ ನಮ್ಮ ತಂಡ ನಂಬಲಾಗದಿರುವ ರೀತಿಯಲ್ಲಿ ಚಟುವಟಿಕೆಯಲ್ಲಿ ಪಾಲ್ಗೊಂಡಿತು ಹಾಗೂ ಈ ಟಾಸ್ಕ್ ಅನ್ನು ಪೂರ್ಣಗೊಳಿಸುವುದರೊಂದಿಗೆ ಬಹಳ ಉತ್ತಮ ಸಮವಯನ್ನು ನಾವು ಕಳೆದೆವು.

ಈ ೬೦ ಕಿ.ಮೀ.ಗಳ ಸೈಕ್ಲಿಂಗ್ ನಂತರ ಸೈಕಲ್‌ನಲ್ಲೇ ಬೆಟ್ಟವನ್ನು ಹತ್ತುವ ೧೦ ಕಿ.ಮೀ.ಗಳ ಆಯ್ಕೆಯೂ ಇತ್ತು. ಈ ರೀತಿಯ ಹೋರಾಟದಿಂದ ಕೂಡಿರುವ ಸವಾಲುಗಳಲ್ಲಿ ಭಾಗವಹಿಸುವುದೇ ಇತ್ತೀಚಿನ ವರ್ಷಗಳಲ್ಲಿ ನನ್ನ ದೇಹದಾರ್ಢ್ಯ ಹಾಗೂ ಉತ್ತಮ ಆರೋಗ್ಯದ ಗುಟ್ಟಾಗಿದೆ. ನನ್ನ ದೇಹದ ಜೊತೆಗೆ ನನ್ನ ಮನಸ್ಸನ್ನೂ ಸಹ ಆರೋಗ್ಯಕರವಾಗಿ ಇಟ್ಟುಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸಿದೆ. ಈ ಸವಾಲುಗಳಲ್ಲಿ ಬರುವ ಟಾಸ್ಕ್ಗಳು ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಕಠಿಣವಾಗಿರುತ್ತವೆ. ಯಾವುದೇ ಸವಾಲಿದ್ದಾಗ ಅದನ್ನು ಪೂರೈಸುವಲ್ಲಿ ನನಗೆ ಬಹಳ ಆನಂದವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ೧೫ ಕಿ.ಮೀ. ಗಳ ಸೈಕ್ಲಿಂಗ್ ಚಾರಣಕ್ಕೂ ನಾನು ಒಪ್ಪಿದೆ.

ಸೈಕಲ್‌ನಲ್ಲಿ ಬೆಟ್ಟವನ್ನು ಹತ್ತಿದ ನಂತರ ಅದೇ ರೀತಿ ಕೆಳಗಿಳಿಯುವುದು ನಮ್ಮ ಸವಾಲಿನಲ್ಲಿ ಸೇರಿತ್ತು. ಹಾಗಾಗಿ ನಾನು ನನ್ನ ಸೈಕಲ್ ಮೇಲೆ ಕುಳಿತು ಬೆಟ್ಟದಿಂದ ಇಳಿಯುತ್ತಿದೆ. ಅದು ಬಹಳ ಕಡಿದಾದ ಮಾರ್ಗವಾಗಿತ್ತು. ಈ ರೀತಿ ಕಡಿದಾದ ತಿರುವುಗಳೂ, ಹಾಗೂ ದಾರಿಯಲ್ಲಿ ಬರುವಾಗ ಒಂದು ಕಡೆ ನನ್ನ ಎಡ ಭಾಗದಲ್ಲಿ ಬಹಳ ಆಳವಾದ ಪ್ರಪಾತವಿತ್ತು. ನನ್ನ ಎದುರುಗಡೆಯಿಂದ ಒಂದು ಕಾರು ಬೆಟ್ಟ ಹತ್ತಿಕೊಂಡು ಬರುತಿತ್ತು. ನನ್ನ ತಂಡದ ಮತ್ತೋಬ್ಬ ಚಾರಣಿಗ ಸ್ಟಿçವರ್, ಫೆಲಿಕ್ಸ್ ಸ್ಟೆಲ್ಲ ಮಾಸ್ಜೆಕ್ ನನ್ನ ಮುಂದೆ ಹೋಗುತ್ತಿದ್ದ. ಕಾರು ಬರುತ್ತಿರುವುದನ್ನು ನೋಡಿ ನಾನು ನನ್ನ ಸೈಕಲ್‌ನ ಎರಡೂ ಬ್ರೇಕ್‌ಗಳನ್ನು ಹಿಡಿದೆ, ಆದರೆ ಅದು ಕಾರ್ಯನಿರ್ವಹಿಸಲಿಲ್ಲ. ಹಾಗಾಗಿ, ಸೈಕಲ್ ನಿಲ್ಲುವುದರ ಬದಲಿಗೆ ಹೆಚ್ಚು ಹೆಚ್ಚು ವೇಗಪಡೆದುಕೊಂಡಿತು. ಆಗ ಪ್ರಪಾತದಲ್ಲಿ ಧುಮುಕುವುದು, ಕಾರಿಗೆ ಅಪ್ಪಳಿಸುವುದು ಅಥವಾ ನನ್ನ ಮುಂದೆ ತೆರಳುತ್ತಿದ್ದಂತಹ ಫೆಲಿಕ್ಸ್ಗೆ ಡಿಕ್ಕಿ ಹೊಡೆಯುವುದಷ್ಟೇ ನನ್ನ ಮುಂದಿದ್ದ ಆಯ್ಕೆಗಳಾಗಿದ್ದವು.

ನಾನು ನನ್ನ ಸೈಕಲ್‌ನ ಎರಡೂ ಬ್ರೇಕ್‌ಗಳನ್ನು ಸಾಧ್ಯವಾದಷ್ಟೂ ಗಟ್ಟಿಯಾಗಿ ಹಿಡಿದುಕೊಂಡೆ (ನಂತರದಲ್ಲಿ ನನಗೆ ತಿಳಿದು ಬಂದಿದ್ದೇನೆಂದರೆ, ಒಂದು ಬ್ರೇಕ್ ಅನ್ನು ಒಮ್ಮೆ ಬಿಟ್ಟು ನಂತರ ಹಿಡಿದುಕೊಳ್ಳಬೇಕಿತ್ತು), ಆದರೆ ಅದು ಕೆಲಸ ಮಾಡಲಿಲ್ಲ. ಆಗ ನಾನು ನನ್ನ ಮುಂದೆ ಹೋಗುತ್ತಿದ್ದಂತಹ ಫೆಲಿಕ್ಸ್ಗೆ ಜೋರಾಗಿ “ಬ್ರೇಕ್ ಕೆಲಸ ಮಾಡುತ್ತಿಲ್ಲ,” ಎಂದು ಕೂಗಿ ಹೇಳಿದೆ. ಆದರೆ ಆತನಿಗೂ ಬೇರೆ ದಾರಿ ಇರಲಿಲ್ಲ. ಹಾಗಾಗಿ ನಾವಿಬ್ಬರೂ ಬಹಳ ಜೋರಾಗಿ ಬಿದ್ದೆವು.

ನಾವಿಬ್ಬರೂ ನಮ್ಮ ಸೈಕಲ್‌ಗಳಿಂದ ಕೆಳಗೆ ಬಿದ್ದೆವು. ಆ ರಭಸಕ್ಕೆ ನಮ್ಮ ತಲೆಗಳು ಹಾಗೂ ಮೈ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿತು. ನಾವು ಹೆಲ್ಮೆಟ್ ಧರಿಸಿದ್ದ ಕಾರಣದಿಂದಾಗಿ ತಲೆಗೆ ಪೆಟ್ಟಾಗಲಿಲ್ಲ, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೇ ಮೊದಲಲ್ಲ ಹಿಂದೆಯೂ ಬಹಳ ಬಾರಿ ಹೆಲ್ಮೆಟ್‌ಗಳು ನಮ್ಮನ್ನು ರಕ್ಷಿಸಿವೆ. ನಾವಿಬ್ಬರೂ ರಸ್ತೆಯ ಮೇಲೆ ಅಂಗಾತ ಬಿದ್ದೆವು. ಕೂಡಲೇ ನಮ್ಮ ತಂಡದ ಇತರೆ ಸದಸ್ಯರು ಸುತ್ತಲೂ ಸೇರಿದರು. ನಾನು ಹಾಗೇ ಬಿದ್ದಿದ್ದೆ. ನನ್ನ ಬೆನ್ನ ಮೂಳೆ ಮುರಿದಿದೆಯೇನೋ ಅನಿಸಿತು. ನಿಧಾನವಾಗಿ ನನ್ನ ಕೈಕಾಲುಗಳನ್ನು ಅಲುಗಾಡಿಸಿದೆ. ಅದೃಷ್ಟ ಎನ್ನುವಂತೆ ಅವು ಚಲಿಸಿದವು. ಫೆಲಿಕ್ಸ್ ಕೂಡ ಅದೇ ಪರಿಸ್ಥಿತಿಯಲ್ಲಿದ್ದ. “ನನ್ನನ್ನು ಯಾವಾಗಲೂ ಯಾರೂ ಸಹ ರಸ್ತೆಯಿಂದ ತಳ್ಳಿ, ಮುಂಗಡವಾಗಿ ಕ್ಷಮೆಯನ್ನು ಕೇಳಿರಲಿಲ್ಲ – ಇದು ಬಹಳ ಸೌಮ್ಯವಾಗಿತ್ತು,!” ಎಂದ.

ನಮ್ಮ ತಂಡ ವಾಹನ ಸಂಚಾರವನ್ನು ನಿಲ್ಲಿಸಿತು. ನಾವಿಬ್ಬರೂ ನಿಧಾನವಾಗಿ ಎದ್ದು ವರ್ಜಿನ್ ಗೊರ್ಡಾ ಆಸ್ಪತ್ರೆಗೆ ತೆರಳಲು ವ್ಯಾನ್ ಕಡೆ ನಡೆದೆವು. ಆಗ ಮತ್ತೊಂದು ವ್ಯಾನ್ ತಿರುವಿನಲ್ಲಿ ವೇಗವಾಗಿ ಬಂದು ನಾವು ಬಿದ್ದಿದ್ದ ಜಾಗದಿಂದಲೇ ತೆರಳಿತು – ಕ್ಷಣ ಮಾತ್ರದಲ್ಲಿ ನಾವು ಬಚಾವಾದೆವು ಅನಿಸಿತು!

ನಮಗೆ ನೆರವಾದ ವೈದ್ಯಕೀಯ ತಂಡಕ್ಕೆ ನನ್ನ ಧನ್ಯವಾದಗಳು. ನನ್ನ ಮೈಮೇಲೆ ಹಲವು ಕಡೆ ಗಂಭೀರ ಸ್ವರೂಪದ ಗಾಯಗಳಾಗಿವೆ, ನನ್ಮ ಮೊಣಕೈ ಮೇಲೆ… ನನ್ನ ಸೊಂಟದ ಮೇಲೆ ದೊಡ್ಡ ಊತ ಗೋಚರಿಸಿದೆ, ಜೊತೆಗೆ ನನ್ನ ಕಾಲಿನ ಮೇಲೆ ಬೃಹತ್ ಗಾತ್ರದ ಹೆಮಟೋಮ ಗೋಚರಿಸಿದೆ. ಆದರೆ ನನ್ನ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತಿತ್ತು ಅನಿಸಿದೆ.

ಸೈಕಲ್ ತುಳಿಯುವಾಗ ಈ ರೀತಿ ಆಗಿರುವುದು ಇದೇ ಮೊದಲೇನಲ್ಲ. ೨೦೧೬ರಲ್ಲಿ ಒಮ್ಮೆ ನಾನು ಸೈಕಲ್ ಅಪಘಾತಕ್ಕೀಡಾಗಿದ್ದಾಗಿ ಒಂದು ಚಿತ್ರವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆ ಅಪಘಾತದಲ್ಲಿ ನನ್ನ ಕೆನ್ನೆಗೆ ಗಾಯವಾಗಿತ್ತು.
ಈ ರೀತಿಯ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡು ಬದುಕುಳಿದು ನಡೆದು ಹೋದವರು ಬಹಳ ಅದೃಷ್ಟವಂತರು. ಇಂತಹ ಸಂದರ್ಭಗಳಲ್ಲಿ ಎಷ್ಟೋ ಮಂದಿಗೆ ಈ ಅದೃಷ್ಟ ಇರುವುದಿಲ್ಲ. ಆದರೆ ನಾನು ಸವಾಲುಗಳು ಹಾಗೂ ಸಾಹಸಗಳನ್ನು ಕೈಗೊಳ್ಳುವುದನ್ನು ನಿಲ್ಲಿಸುವುದಿಲ್ಲ – ನನ್ನ ಇಡೀ ಜೀವನವನ್ನ ನಾನು ಇದೇ ರೀತಿ ಕಳೆದಿದ್ದೇನೆ.

ಮೈಮೇಲೆ ಗಾಯಗಳಾದಾಗ ನಿಮ್ಮ ದೇಹ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ವಿವರಿಸಲಾಗುವುದಿಲ್ಲ – ಆದರೆ ನಾನು ಮನೆಗೆ ಹಿಂದಿರುಗಿ ಹಾಸಿಗೆಯ ಮೇಲೆ ಬಿದ್ದುಕೊಂಡಾಗಲೇ ಮೈಮೇಲಿನ ಗಾಯಗಳು ನೋವಾಗಲು ಆರಂಭಿಸಿದವು. ಪ್ರಸ್ತುತ ನಾನು ನನ್ನ ಪಾದಗಳನ್ನು ಮೇಲಿಟ್ಟುಕೊಂಡು, ಗಾಯಗಳ ಮೇಲೆ ಐಸ್ ಪ್ಯಾಕ್‌ಗಳನ್ನು ಇಟ್ಟುಕೊಂಡು ಕೂತಿದ್ದೇನೆ. ಫೆಲಿಕ್ಸ್ ಕೂಡ ಚೆನ್ನಾಗಿದ್ದಾನೆ. ನಿಮ್ಮೆಲ್ಲರ ಹಾರೈಕೆಗೆ ನನ್ನ ಧನ್ಯವಾದಗಳು!

https://bit.ly/3DbeW5O

key words : Richard Branson-cycling-accident-great-escape