ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಅಳಿಯ ರಿಷಿ ಸುನಕ್ ಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಶುಭಹಾರೈಕೆ.

ಬೆಂಗಳೂರು,ಅಕ್ಟೋಬರ್,25,2022(www.justkannada.in):   ಇಂಗ್ಲೇಡ್ ಪ್ರಧಾನಿಯಾಗಿ ಆಯ್ಕೆಯಾಗಿರುವ ತಮ್ಮ ಅಳಿಯ ರಿಷಿ ಸುನಕ್  ಅವರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಶುಭಹಾರೈಸಿದ್ಧಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಣಮೂರ್ತಿ,  ಅವರು, ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ. ರಿಷಿ ಅವರಿಗೆ ಅಭಿನಂದನೆಗಳು. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರ ಯಶಸ್ಸನ್ನು ನಾವು ಬಯಸುತ್ತೇವೆ. ರಿಷಿ ಶಕ್ತಿ ಮೀರಿ ಕೆಲಸ ಮಾಡು ವಿಶ್ವಾಸವಿದೆ ಎಂದು ನುಡಿದಿದ್ದಾರೆ.

42 ವರ್ಷದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದು ದೇಶದ ಗೌರವ ಹೆಚ್ಚಿಸಿದೆ. 2009ರಲ್ಲಿ ತಮ್ಮ ಮಗಳು ಅಕ್ಷತಾ ಮೂರ್ತಿಯನ್ನು ಮದುವೆಯಾದ ರಿಷಿ ಸುನಕ್ ಅವರನ್ನು ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕೂಡ ಅಭಿನಂದಿಸಿದ್ದಾರೆ.

key words: Rishi Sunak- England-Prime Minister- Narayanamurthy -wishes

ENGLISH SUMMARY…

Rishi Sunak, son-in-law of Infosys founder Narayana Murthy becomes the Prime Minister of England
Bengaluru, October 25, 2022 (www.justkannada.in): Infosys founder Narayana Murthy has wished his son-in-law Rishi Sunak, who has been elected as the new Prime Minister of England.
In his response, Narayanamurthy mentioned that he is indeed very proud of his son-in-law. “I congratulate Rishi and wish him all the success. I hope that Rishi will work hard and win the love of the people of that country,” he mentioned.
The 42-year-old Rishi Sunak has been elected as the Prime Minister of England, bringing respect and proud to our country, He married Akshata Murthy, daughter of Narayana Murthy in 2009. Sudha Murthy has also congratulated her son-in-law on assuming the highest post of England.
Keywords: Infosys/ Narayana Murthy/ Sudha Murthy/ Rishi Sunak/ England/ Prime Minister