ಮೈಸೂರು,ಜೂನ್17,2022(www.justkannada.in): ವಿಶ್ವ ಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಮೋದಿ ಬರುವ ರಸ್ತೆಗಳು ಮಾತ್ರ ಅಭಿವೃದ್ಧಿ ಎಂಬ ಟೀಕೆಗಳು ವ್ಯಕ್ತವಾಗಿದೆ.
ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ, ಮೈಸೂರಿನ ಜನ ನನಗೆ ಮೊದಲು ಅಭಿನಂದನೆ ಸಲ್ಲಿಸಬೇಕು. ಮೋದಿ ಆಗಮನದ ನೆಪದಲ್ಲಾದರೂ ರಸ್ತೆ ಅಭಿವೃದ್ಧಿಯಾಗುತ್ತಿದೆ. ನಾನು ಮೈಸೂರಿಗೆ ಮೋದಿ ಅವರನ್ನ ಕರೆದುಕೊಂಡು ಬರುತ್ತಿದ್ದೇನೆ ಎಂದಿದ್ದಾರೆ.
ಮೈಸೂರಿನ ಪ್ರಮುಖ ರಸ್ತೆಗಳು ಕೋವಿಡ್ ನಿಂದಾಗಿ ಎರಡು ವರ್ಷ ಅಭಿವೃದ್ದಿ ಕಂಡಿರಲಿಲ್ಲ. ಏರ್ ಪೋರ್ಟ್, ರನ್ ವೇ ವಿಸ್ತರಣೆಗೆ ಅನುದಾನ ನೀಡಿದ್ದಾರೆ. ಚಾಮುಂಡಿಬೆಟ್ಟಕ್ಕೆ ಪ್ರಸಾದ್ ಯೋಜನೆ ಮೂಲಕ 50 ಕೋಟಿ ರೂ. ಕೊಟ್ಟಿದ್ದಾರೆ. ರೈಲ್ವೆ , ರಸ್ತೆ ಸಂಪರ್ಕಕ್ಕೆ ಅನುದಾನ ನೀಡಿಯೇ ಮೈಸೂರಿಗೆ ಬರುತ್ತಿದ್ದಾರೆ. ಈಗ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಖುಷಿ ಪಡಿ. ಮುಂದಿನ 6 ತಿಂಗಳೊಳಗೆ ಮೈಸೂರಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
Key words: Road development – Modi- arrival-MP-Pratap Simha