ಮೈಸೂರು,ಆಗಸ್ಟ್,6,2022(www.justkannada.in): ಸರಗಳ್ಳತನ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನ ಮೈಸೂರು ಪೊಲೀಸರು ಬಂಧಿಸಿ. ರೂ. 5 ಲಕ್ಷ ಮೌಲ್ಯದ ಒಟ್ಟು 127 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ರೂ 1,50,000 ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಮೈಸೂರು ನಗರದ ನರಸಿಂಹರಾಜ ವಿಭಾಗದ ಎಸಿಪಿ ಸ್ಕ್ವಾಡ್ ಮತ್ತು ನರಸಿಂಹರಾಜ ಪೊಲೀಸ್ ಠಾಣಾ ಪೊಲೀಸರು ದಿನಾಂಕ: 22/07/2022 ರಂದು ಸರಗಳ್ಳತನ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್ನಿಬ್ಬರ ಸಹಚರರೊಂದಿಗೆ ಸೇರಿ ಕಳ್ಳತನ ಮಾಡುತ್ತಿದ್ದುದ್ದಾಗಿ ನೀಡಿದ ಮಾಹಿತಿ ಮೇರೆಗೆ, ದಿನಾಂಕ 26-07 2022 ರಂದು ಕಾರಾಗೃಹದಲ್ಲಿದ್ದ ಇನ್ನಿಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದ 5,00,000 ರೂ. ಮೌಲ್ಯದ ಒಟ್ಟು 127 ಗ್ರಾಂ ತೂಕದ 5 ಚಿನ್ನದ ಸರಗಳು ಮತ್ತು 1.50,000 ರೂ ಮೌಲ್ಯದ ಮೂರು ದ್ವಿಚಕ್ರ ವಾಹಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ನರಸಿಂಹರಾಜ-1, ಜ್ಞಾನ ಭಾರತಿ ಠಾಣಿ-1, ಬ್ಯಾಡರಹಳ್ಳಿ ಠಾಣೆ-1, ತಾವರಕೆರೆ ಠಾಣಿ-1, ಕನಕಪುರ ಠಾಣಿ-2, ಕೆ.ಆರ್.ಎಸ್ ಠಾಣಿ-1, ನಂಜನಗೂಡು ಗ್ರಾಮಾಂತರ ಠಾಣಿ-1, ಪಾಂಡವಪುರ ಠಾಣಿ-1, ಕಿರುಗಾವಲು ಠಾಣೆಯ-1 ದ್ವಿ ಚಕ್ರ ವಾಹನ ಮತ್ತು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಮೈಸೂರು ನಗರದ ಡಿ.ಸಿ.ಪಿ ಪ್ರದೀಪ್ ಗುಂಟಿ, ಮತ್ತು ಡಿ.ಸಿ.ಪಿ ಗೀತಾ ಎಂ.ಎಸ್, ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ. ಎಂ ಶಿವಶಂಕರ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪತ್ತೆ ಕಾರ್ಯದಲ್ಲಿ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್. ಅಜರುದ್ದೀನ್, ಪಿ.ಎಸ್.ಐ. ಗಂಗಾಧರ್ ಕೆ.ಎಸ್ ಎ.ಎಸ್.ಐ ರವಿ, ಎ.ಎಸ್.ಐ ಅನಿಲ್ ಕೆ ಶಂಕಪಾಲ್ ಮತ್ತು ಸಿಬ್ಬಂದಿಗಳಾದ ಎ.ಸಿ.ಪಿ ಸ್ಕ್ವಾಡ್ ನ ಅಂಗರಾಜಪ್ಪ, ರಮೇಶ್, ಸುರೇಶ್, ಮಂಜುನಾಥ ಆರ್.ಆರ್. ಹನುಮಂತ ಕಲ್ಲೇದ, ಮಹೇಶ್ ವೈ.ಟಿ. ದೊಡ್ಡಗೌಡ ಮತ್ತಿತ್ತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Key words: robbery- two wheeler- theft-Arrest – three accused-mysore