ಬೆಂಗಳೂರು,ಜುಲೈ,9,2021(www.justkannada.in): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಹೇಳಿಕೆ ನೀಡುತ್ತಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೆಂಡಾಮಂಡಲರಾಗಿದ್ದಾರೆ.
ಈ ಮಧ್ಯೆ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿರುವ ರಾಕ್ ಲೈನ್ ವೆಂಕಟೇಶ್, ಹೆಚ್ ಡಿ ಕುಮಾರಸ್ವಾಮಿ ಅವರು ಆಡಿಯೋ ವಿಡಿಯೋ ಬಾಂಬ್ ಎಂದು ಬೆದರಿಕೆ ಹಾಕುವುದು ಹೊಸದಲ್ಲ. ಚುನಾವಣೆಯ ವೇಳೆ ಚುನಾವಣಾ ಪ್ರಚಾರಕ್ಕಾಗಿ ನಾವೆಲ್ಲರೂ ಹೋಟೆಲ್ ನಲ್ಲಿದ್ದೆವು. ಆಗ ನಾನು ಮತ್ತು ಸುಮಲತಾ ಹೋಟೆಲ್ ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್ ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ಧಾರೆ.
ಒಂದು ಕಡೆಭ್ರಷ್ಟಾಚಾರ ಅಂತಾರೆ. ಮತ್ತೊಂದು ಕಡೆ ಅಂಬರೀಶ್ ನಮ್ಮ ಸ್ನೇಹಿತ ಅಂತಾರೆ. ದಿ.ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ ಎಂದು ಕಿಡಿಕಾರಿದ ರಾಕ್ ಲೈನ್ ವೆಂಕಟೇಶ್, ಚಿತ್ರರಂಗದ ಬಗ್ಗೆ ಮಾತನಾಡ್ತೀರಾ ಅಲ್ವಾ ಚಿತ್ರರಂಗದಿಂಧ ನೀವು ಲಾಭ ಪಡೆದಿದ್ದೀರಿ. ಆದರೆ ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನು ಮಾಡಿದ್ದೀರಾ ..? ಎಂದು ಪ್ರಶ್ನಿಸಿದರು.
Key words: Rock Line –Venkatesh- serious allegations- against -HD Kumaraswamy