ಶಾಸಕರ ‘ ಬ್ಯಾಗ್ ‘ ಭ್ರಷ್ಟಚಾರ ಅರೋಪಕ್ಕೆ ಐಎಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ‘ ಕಿಕ್ ‘…!

 

ಮೈಸೂರು, ಸೆ.03, 2021 : (www.justkannada.in news) : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಯಾವುದೇ ಅವ್ಯವಹಾರವಾಗಲಿ, ಭ್ರಷ್ಟಚಾರವಾಗಲಿ ನಡೆದಿಲ್ಲ. ಈ ಬಗ್ಗೆ ಶಾಸಕ ಸಾ.ರ.ಮಹೇಶ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಬೆಳಗ್ಗೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಾ.ರ.ಮಹೇಶ್, ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಬ್ಯಾಗ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಒಂದು ಕೋಟಿ ರೂ. ಮೌಲ್ಯದ ಬ್ಯಾಗಿಗೆ 7 ಕೋಟಿ ರೂ. ತನಕ ಹಣ ಪಾವತಿಸಿದ್ದಾರೆ. ಆ ಮೂಲಕ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ( ಪ್ರಿಂಟ್ ಮೀಡಿಯಾ ಗ್ರೂಪ್, ಮೈಸೂರು ) ವಾಟ್ಸ್ ಅಪ್ ಮೂಲಕ ಸ್ಪಷ್ಟನೆ ನೀಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿರುವುದಿಷ್ಟು…

ಭಾರತ ಸರಕಾರದ ಸ್ವಚ್ಛ ಭಾರತ ಅಭಿಯಾನದಡಿ ಪ್ಲಾಸ್ಟಿಕ್ ಬ್ಯಾಗ್ ಗಳ ಬಳಕೆ ಸಂಪೂರ್ಣ ನಿಷೇಧಿಸಿ, ಬಟ್ಟೆ ಬ್ಯಾಗುಗಳ ಬಳಕೆಗೆ ಉತ್ತೇಜನ ನೀಡಲು ತೀರ್ಮಾನಿಸಲಾಗಿತ್ತು. ಏ. 5 ರಿಂದಲೇ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿನ ಅಗತ್ಯಕ್ಕೆ ತಕ್ಕಂತೆ ಬಟ್ಟೆ ಬ್ಯಾಗುಗಳನ್ನು ( ಪರಿಸರ ಸ್ನೇಹಿ ) ಪೂರೈಸಲು , ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮಾ. 23 ರಂದು ಪತ್ರ ಬರೆಯಲಾಗಿತ್ತು.

ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿನ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿ 7, 35, 729 ಸಂಖ್ಯೆಯ 5 ಕೆ.ಜಿ ಬ್ಯಾಗ್ ಗಳು ಹಾಗೂ 7, 35, 729 ಸಂಖ್ಯೆಯ 10 ಕೆ.ಜಿ. ಬ್ಯಾಗ್ ಗಳು ಸೇರಿ ಒಟ್ಟು 14, 71, 458 ಬ್ಯಾಗುಗಳ ಬೇಡಿಕೆಯಿತ್ತು.

ಇದಕ್ಕೆ ಉತ್ತರವಾಗಿ ಮಾ.31 ರಂದು ಪತ್ರ ಬರೆದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ, ಬಟ್ಟೆ ಬ್ಯಾಗುಗಳ ಸರಬರಾಜಿಗೆ ಸಂಬಂಧಿಸಿದಂತೆ ದರಪಟ್ಟಿ ನೀಡಿದರು. ಅದರಂತೆ ಮುಂದಿನ ಕ್ರಮಕ್ಕಾಗಿ ಕಾರ್ಯದೇಶ ನೀಡಲಾಯಿತು. ಅದರಂತೆ ಬಟ್ಟೆ ಬ್ಯಾಗುಗಳನ್ನು ಹಂತಹಂತವಾಗಿ ಪೂರೈಕೆ ಮಾಡಲಾಗಿದೆ. ನಾನು ಮೈಸೂರಿನಿಂದ ವರ್ಗಾವಣೆಗೊಳ್ಳುವ ತನಕ ಅಂದ್ರೆ, ನನ್ನ ಅವಧಿಯಲ್ಲಿ ಯಾವುದೇ ಬಿಲ್ ಪಾವತಿಯಾಗಿಲ್ಲ. ಆದ್ದರಿಂದ ಶಾಸಕ ಸಾ.ರ.ಮಹೇಶ್ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ.

ಕಳೆದ ತಿಂಗಳು ಬಿಲ್ ಪಾವತಿ :

ಪರಿಸರ ಸ್ನೇಹಿ ಬಟ್ಟೆ ಬ್ಯಾಗುಗಳ ಖರೀದಿಗೆ ಸಂಬಂಧಿಸಿದಂತೆ ಕಳೆದ ತಿಂಗಳಷ್ಟೆ ಮೊದಲ ಪೇಮೆಂಟ್ ನಡೆದಿದೆ ಎನ್ನಲಾಗಿದೆ. ಆ. 30 ರಂದು , 9, 59, 991 ರೂಪಾಯಿ ಮೌಲ್ಯದ ಚೆಕ್ಕನ್ನು ನಂಜನಗೂಡು ಮುನ್ಸಿಪಲ್ ಕೌನ್ಸಿಲ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಪಾವತಿಸಿದೆ.

ಸಿಂಧೂರಿ ಸ್ಪಷ್ಟನೆ : ಶಾಸಕರ ಎಲ್ಲಾ ಆರೋಪ ಸತ್ಯಕ್ಕೆ ದೂರ ಆಗಿವೆ

mysore-DC-rohini-sindhoori-family-corona-posotive

2021 ಮಾರ್ಚ್ 23 ರಂದು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಘನ ತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ಲಾಸ್ಟಿಕ್‌ ನಿಷೇಧವನ್ನು ಜಾರಿಗೆ ತರಲು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಉಚಿತವಾಗಿ ಸಣ್ಣ – ಮಧ್ಯಮ ಗಾತ್ರದ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ವಿತರಿಸಲು ನಿರ್ಧರಿಸಲಾಗಿದೆ. 10 ಲಕ್ಷ ಬ್ಯಾಗ್ ಗಳು ಅವಶ್ಯಕತೆ ಇದ್ದು ಉತ್ಪನ್ನದ ವೆಚ್ಚ, ದರ, ತಾಂತ್ರಿಕ ವಿವರ ಎಲ್ಲವನೂ ಸಲ್ಲಿಸಲು ಕೋರಲಾಗಿತ್ತು.
ಈ ಪತ್ರಕ್ಕೆ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿವರಣೆ ಸಲ್ಲಿಸಿ ಬ್ಯಾಗ್ ಗೆ ಜಿ ಎಸ್ ಟಿ ಸೇರಿ 52 ರೂಪಾಯಿ ಆಗುತ್ತದೆ ಎಂದು ನಮೂದಿಸಿದ್ದರು.
ಈ ವಿಚಾರದಲ್ಲಿ ದರ ನಿಗದಿ ಮಾಡಿದ್ದು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ. ಇದರಲ್ಲಿ ನನ್ನ ಪಾತ್ರ ಏನಿರುತ್ತದೆ? ಕಿಕ್ ಬ್ಯಾಕ್ ಎಲ್ಲಿಂದ ಬರುತ್ತದೆ. ಸರಕಾರದ ಭಾಗವಾಗಿರೋ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮವೇ ದರ ನಿಗದಿ ಮಾಡಿದ ಮೇಲೆ ಇದರಲ್ಲಿ ಖಾಸಗಿಯವರ ಪಾತ್ರ ಎಲ್ಲಿರುತ್ತದೆ? ಶಾಸಕರು ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಒಂದಂಶವೂ ಸತ್ಯವಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

key words : Rohini Sindhuri- IAS- Commissioner Endowment- bangalore-bag-allegation-clarification

ENGLISH SUMMARY :

The allegations against me in context of purchase of cloth bags for distribution to households in Mysuru district as substitute of plastic bags to achieve plastic free Mysuru, are blatant lies and contrary to truth. The detailed factual note in this regard is attached herewith.
Firstly, the workorder is given to theKarnataka Handloom Corporation – a Government of Karnataka undertaking. The orders are in due compliance of the KTPP Act as it is to a government agency.


Secondly not a single paise payment was ever made by me during the tenure of mine as Deputy Commissioner.
Thirdly, it may be noted that only recently Nanjungud Municipality (long after I left Mysuru in June 2021) that Rs 9,59,991 has been paid to Karnataka Handloom Corporation. The only payment they have received until today.

The whole method of attacking me is a part of Standard Operating Procedure to browbeat and scare the officers to not dare to enquire into the illegalities and irregularities committed by these individuals.
I hope that present officers will continue to show courage and bring out the truth in each case.
Rohini Sindhuri, IAS,Commissioner Endowment ,