ಮೈಸೂರು, ಜೂ.10, 2-21 : (www.justkannada.in news) ನಗರದ ವಿವಾದಿತ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಶಾಸಕ ಸಾ.ರಾ.ಮಹೇಶ್ ಒಡೆತನದ ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದಂತೆ ‘ ಸಮಗ್ರ ತನಿಖೆ’ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ, ಮೈಸೂರಿನ ವರ್ಗಾಯಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ ಅವರು ಹೇಳಿರುವುದಿಷ್ಟು…
ಚೌಲ್ಟ್ರಿಗೆ ಸಂಬಂಧಿಸಿದಂತೆ ಅನೇಕ ಅಕ್ರಮಗಳಿವೆ. ಸರ್ವೆ ಸಂಖ್ಯೆ 123 ರಲ್ಲಿ ಚಾಲ್ಟ್ರಿ ನಿರ್ಮಾಣವಾಗಿದೆ. ಆದರೆ ಈ ಜಾಗ ಸರ್ಕಾರಿ ಗೋಮಾಳ ಭೂಮಿ. ಆದ್ದರಿಂದ ಅದು ಹೇಗೆ ಖಾಸಗಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತಾದ ಅನುದಾನದ ಸರಿಯಾದ ದಾಖಲೆಗಳು ಲಭ್ಯವಿಲ್ಲ.
ಭೂ ಪರಿವರ್ತನೆಯನ್ನು ಸುಳ್ಳಿನಿಂದ ತೆಗೆದುಕೊಳ್ಳಲಾಗಿದೆ ಮತ್ತು ಮಾಸ್ಟರ್ ಪ್ಲ್ಯಾನ್‌ಗೆ ವಿರುದ್ಧವಾಗಿದೆ.
ವಿಚಾರಣೆಯು ಒಂದು ವಿಷಯಕ್ಕೆ (ರಾಜಕಾಲುವೆ) ಮಾತ್ರ ಆರಿಸುವುದು ಮತ್ತು ಆಯ್ಕೆ ಮಾಡಿರುವುದು.
ಲಿಂಗಾಂಬುದಿ ಕೆರೆ ಸಮೀಪದ ಭೂಮಿಯ ಅತಿಕ್ರಮ ನಡೆದಿದೆ. ಇದನ್ನು ವಿಚಾರಣೆಗೆ ಒಳಪಡಿಸುವಂತೆ ಸಿಂಧೂರಿ ಕೋರಿದ್ದಾರೆ.
ಶಾಸಕ ಸಾ.ರಾ.ಮಹೇಶ್ ಅವರ ಆಯ್ಕೆಯ ಪ್ರಕಾರ, ಕೇವಲ ಒಂದು ಆಯ್ದ ವಿಷಯಕ್ಕೆ ಮಾತ್ರ ವಿಚಾರಣೆ ನಡೆಸದೆ, ಎಲ್ಲಾ ಅಂಶಗಳ ಬಗ್ಗೆ ಸಮಗ್ರ ಮತ್ತು ಸರಿಯಾದ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದಾರೆ.
KEY WORDS : Rohini Sindhuri- multiple irregularities- Chaultry is Govt Gomal Land-S R Mahesh.
ENGLISH SUMMARY :
To
RC sir ,
There are multiple irregularities. Sy No 123 where Chaultry is Govt Gomal Land. How it become private – no proper records of grant are available. Land conversion was taken by falsehood and contrary to master plan. The enquiry is picking and choosing one thing only. Lingambudi land next to lake is left out of enquiry. Kindly ensure comprehensive and proper enquiry on all points rather than selective one point as per choice of Shri S R Mahesh.
Regards
Rohini Sindhuri