ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಯ್ಕೆ : ನ.0 3ಕ್ಕೆ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸಿಎಟಿ.

 

ಮೈಸೂರು,ಅಕ್ಟೋಬರ್, 23,2020(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನವೇ ತಮ್ಮನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸಿಎಟಿ ನವೆಂಬರ್ 3 ಕ್ಕೆ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಅಡ್ವೊಕೇಟ್ ಜನರಲ್ ಅವರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ನ.3 ಕ್ಕೆ ಮುಂದೂಡಲಾಯಿತು.

jk-logo-justkannada-logo

ಘಟನೆ ಹಿನ್ನೆಲೆ :

ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನವೇ ತಮ್ಮನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸಿಎಟಿ ಈ ಹಿಂದೆ ಅಕ್ಟೋಬರ್ 23ಕ್ಕೆ ಮುಂದೂಡಿತ್ತು.
ಅರ್ಜಿದಾರರ ಪರ ವಕೀಲ, ಎ.ಎಸ್.ಪೊನ್ನಣ್ಣ ವಾದ ಮಂಡನೆ ಬಳಿಕ ಪ್ರತಿವಾದ ಮಂಡಿಸಲು ಎಜಿ ಮತ್ತೆ ಕಾಲಾವಕಾಶ ಕೋರಿದರು .ಈ ಹಿನ್ನೆಲೆ ಸಿಎಟಿ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ಮುಂದೂಡಿತ್ತು. ಇದೀಗ ಮತ್ತೆ ಮರು ಕಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನಾಲ್ಕನೇ ಬಾರಿಗೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

Mysore-dc-rohini-sindoori-tourist-place-closer-order-withdrawn-by-cm-yadiyurappa-set.back-to-Mysore-dc

ooooo

Key words: Rohini Sindhuri – Mysore- DC- CAT- postponed –petition -April 23– IAS Officer- B.Sharath