ಮೈಸೂರು,ಜೂನ್,10,2021(www.justkannada.in): ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ನಡುವಿನ ಆರೋಪ- ಪ್ರತ್ಯಾರೋಪ ಬೇರೆ. ರೋಹಿಣಿ ಸಿಂಧೂರಿ ಆದೇಶಗಳು ಡೆಫನೆಟ್ಲಿ ಜಾರಿ ಆಗುತ್ತೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಏನು ಮಾಹಿತಿ ಕೊಟ್ಟಿದ್ದಾರೋ ಅದರ ಬಗ್ಗೆ ತನಿಖೆ ನಡೆಯುತ್ತೆ. ಹಿಂದಿನ ಡಿಸಿ ಆದೇಶಗಳನ್ನು ಈಗಿನ ಡಿಸಿ ಕಂಟಿನ್ಯೂ ಮಾಡ್ತಾರೆ. ಮುಖ್ಯ ಕಾರ್ಯದರ್ಶಿಗಳ ವರದಿ ಆಧಾರದ ಮೇಲೆ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಲಾಗಿದೆ. ನಾನು ಅವತ್ತೆ ಹೇಳಿದ್ದೆ, ಸಿಎಸ್ ಏನು ವರದಿ ಕೊಡ್ತಾರೋ ಅದರ ಮೇಲೆ ಕ್ರಮ ಆಗುತ್ತೆ ಅಂತ ಎಂದರು.
ಭೂ ಅಕ್ರಮ ತನಿಖೆಗೆ ರೋಹಿಣಿ ಸಿಂಧೂರಿ ನೇಮಕಕ್ಕೆ ಎಂಎಲ್ ಸಿ ಹೆಚ್. ವಿಶ್ವನಾಥ್ ಒತ್ತಾಯ ಮಾಡಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ವಿಶ್ವನಾಥ್ ಸೀನಿಯರ್ ಲೀಡರ್, ರಾಜಕಾರಣದಲ್ಲಿ ಮೇಧಾವಿ. ಅವರ ಸಲಹೆಯನ್ನ ಸ್ವೀಕಾರ ಮಾಡ್ತೀವಿ ಎಂದು ಹೇಳಿದರು.
ಲಾಕ್ ಡೌನ್ ವಿಸ್ತರಣೆ ಸುಳಿವು ನೀಡಿದ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರಿನಲ್ಲಿ ಸೋಂಕು ಕಡಿಮೆ ಆಗ್ತಿದೆ. ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಯಶಸ್ವಿ ಆಗುತ್ತಿದೆ. ಲಾಕ್ಡೌನ್ ಜಾರಿ ಸಂಬಂಧ ಇಂದು ಮಧ್ಯಾಹ್ನ ಜನಪ್ರತಿನಿಧಿಗಳ ಸಭೆ ಕರೆದಿದ್ದೇನೆ. ಒಂದು ವಾರ ಲಾಕ್ ಡೌನ್ ವಿಸ್ತರಣೆಗೆ ಅನುಮತಿ ಕೇಳಿದ್ದೇವೆ. ಸಭೆಯಲ್ಲಿ ಚರ್ಚಿಸಿ ಸಿಎಂಗೆ ಅಭಿಪ್ರಾಯ ತಿಳಿಸುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮೈಸೂರು ಮೇಯರ್ ಚುನಾವಣೆ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪಕ್ಷದ ನಿಲುವು ಏನು ಅಂತ ನನಗೆ ಗೊತ್ತಿಲ್ಲ. ಇಂದು ಮಧ್ಯಾಹ್ನ ಪಕ್ಷದ ಸಭೆ ಇದೆ, ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದರು.
Key words: Rohini Sindhuri -orders – definetly –enforced- Minister- ST Somashekhar-mysore