ಬೆಂಗಳೂರು, ಜುಲೈ 22, 2021 (www.justkannada.in): ಕರ್ನಾಟಕ ಸರ್ಕಾರ ವಿಶ್ವವಿಖ್ಯಾತ ಪ್ರವಾಸಿ ತಾಣ ಜೋಗ ಜಲಪಾತದಲ್ಲಿ ಪ್ರವಾಸಿಗರು ಜಲಪಾತದ ಸೊಬಗನ್ನು ಮತ್ತಷ್ಟು ಹತ್ತಿರದಿಂದ ನೋಡಿ ಆನಂದಿಸಲು ರೂ.164 ಕೋಟಿ ವೆಚ್ಚದಲ್ಲಿ ರೋಪ್‌ವೇ ಜೊತೆಗೆ ಬೋಟಿಂಗ್ ವ್ಯವಸ್ಥೆ, ಜಲಕ್ರೀಡೆಗಳು ಹಾಗೂ ರಾತ್ರಿ ವೇಳೆ ಜಲಪಾತದ ಸೊಬಗನ್ನು ಸವಿಯಲು ವಿಶೇಷ ದೀಪಾಲಂಕಾರದ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯನ್ನು ರೂಪಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹರಿಯುವ ಶರಾವತಿ ನದಿಯ ಭಾಗವಾಗಿರುವ ಈ ಜೋಗ ಜಲಪಾತ ಭಾರತದಲ್ಲಿರುವ ಎರಡನೇ ಅತೀ ಎತ್ತರದ ಜಲಪಾತ ಮತ್ತು ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ ಒಂದಾಗಿದೆ.
ಇದಕ್ಕೆ ಪೂರಕವಾಗುವಂತೆ ಶಿವಮೊಗ್ಗದ ವಿಮಾನನಿಲ್ದಾಣ ಕಾಮಗಾರಿಗಳಗೆ ವೇಗ ನೀಡಲಾಗಿದ್ದು, ಇದರಿಂದ ವಿವಿಧ ಸ್ಥಳಗಳಿಂದ ಜೋಗ ಜಲಪಾತಕ್ಕೆ ತಲುಪುವ ಸಮಯ ಕಡಿಮೆಯಾಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜುಲೈ 24ರಂದು ಈ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ.
ಜೋಗ ಜಲಪಾತವನ್ನು ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದ್ದು, ಇದಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಬಿಜೆಪಿ ಎಂಎಲ್‌ಎ ಹರತಾಳ್ ಹಾಲಪ್ಪ ಅವರು ತಿಳಿಸಿದ್ದಾರೆ.
ಸುದ್ದಿ ಮೂಲ: ಬೆಂಗಳೂರು ಮಿರರ್
Keyw words: Rope way -world famous -Jog Falls – Shimoga – night light.