Rotary E-Club of Mysuru: ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ

Road Safety Awareness Program Held in Mysuru to Promote Traffic Safety

 

ಮೈಸೂರು, ಜನವರಿ 30, 2025 – ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಅರಿವು ಮೂಡಿಸುವ ಉದ್ದೇಶದಿಂದ ರೋಟರಿ ಇ-ಕ್ಲಬ್ ಆಫ್ ಮೈಸೂರು ಸೆಂಟರ್ ಇವರು ಮೈಸೂರು ನಗರ ಸಂಚಾರಿ ಪೊಲೀಸ್, ಜೀವರಕ್ಷಾ ಟ್ರಸ್ಟ್, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (SVYM), SVG ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ದೇವ್ದಾನ್ ಫೌಂಡೇಶನ್ ಅವರ ಸಹಯೋಗದೊಂದಿಗೆ ಇಂದು ರಸ್ತೆ ಸುರಕ್ಷತಾ ಜಾಗೃತಿಯ ಕಾರ್ಯಕ್ರಮ ಯಶಸ್ವಿಸಿದ್ದರು.

ಈ ಕಾರ್ಯಕ್ರಮವು ನಾಗರಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಸಂಚಾರ ನಿಯಮಗಳು, ಜವಾಬ್ದಾರಿಯುತ ಚಾಲನೆ ಮತ್ತು ಪಾದಚಾರಿಗಳ ಸುರಕ್ಷತೆ ಕುರಿತು ಪ್ರಜ್ಞೆ ಮೂಡಿಸುವು ಉದ್ದೇಶ ಹೊಂದಿತ್ತು.

ಕಾರ್ಯಕ್ರಮದಲ್ಲಿ ಕೆ.ಆರ್. ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್  ಮಹದೇವಸ್ವಾಮಿ, SVYMನ ರೇಖಾ ಶಣ್ಮುಖ, ಜೀವರಕ್ಷಾ ಟ್ರಸ್ಟ್‌ನ ಸತ್ಯರಾಜ್, SVG ಸೆಂಟರ್ ಆಫ್ ಎಕ್ಸಲೆನ್ಸ್ PU ಕಾಲೇಜಿನ ಪ್ರಾಂಶುಪಾಲ ರಚನ್ ಅಪ್ಪಣಮಯ್ಯ ಮತ್ತು ರೋಟರಿ ಇ-ಕ್ಲಬ್ ಆಫ್ ಮೈಸೂರು ಸೆಂಟರ್‌ನ ಅಧ್ಯಕ್ಷ ರೋ. ವಿಜಯ್ ಬೋಪಣ್ಣ ಉಪಸ್ಥಿತರಿದ್ದರು.

ಜೀವರಕ್ಷಾ ಟ್ರಸ್ಟ್ ವತಿಯಿಂದ CPR ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ SVG ಸೆಂಟರ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳಾದ ಗಣೇಶ್ PB, ನಿಖಿಲ್ PP, ನಿಹಾರ್ VB ಅವರಿಗೆ ಮುಖ್ಯ ಅತಿಥಿ ಮಹದೇವಸ್ವಾಮಿ ಅವರಿಂದ ಜೀವರಕ್ಷಾ BCLS ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಗಳು ರಸ್ತೆ ಸುರಕ್ಷತೆ ಕುರಿತಾಗಿ ಸಂವಾದಾತ್ಮಕ ಪ್ರದರ್ಶನಗಳನ್ನು ನೀಡಿ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾದವು.

SVG ಸೆಂಟರ್ ಆಫ್ ಎಕ್ಸಲೆನ್ಸ್‌ನ ಇಂಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳು ಮತ್ತು ದೇವ್ದಾನ್ ಫೌಂಡೇಶನ್‌ನ ವಿಶೇಷ ಮಕ್ಕಳ ಸಹಭಾಗಿತ್ವದಿಂದ ನಾಟಕ, ಪ್ಲಕಾರ್ಡ್ ಪ್ರದರ್ಶನ ಹಾಗೂ ಸಾರ್ವಜನಿಕರಿಗೆ ಮಾಹಿತಿ ಹಂಚುವ ಕಾರ್ಯ ನಡೆಯಿತು.

key words: Road Safety Awareness, Mysuru, Traffic Safety, Rotary E-Club of Mysuru

 SUMMARY:

Road Safety Awareness Program Held in Mysuru to Promote Traffic Safety

Mysuru, January 30, 2025 – A Road Safety Awareness Program was successfully conducted today by the Rotary E-Club of Mysuru Center in association with the Mysuru City Traffic Police, Jeevaraksha Trust, Swami Vivekananda Youth Movement (SVYM), Interact Clubs of SVG Center of Excellence and Devdan Foundation.

The initiative aimed to educate citizens, especially young students, about traffic rules, responsible driving, and pedestrian safety.

The event featured an awareness program conducted by Sri. Mahadevaswamy, Police Inspector, KR Traffic Police Station at Ramaswamy Circle. Ms. Rekha Shanmukha from SVYM, Mr. Sathyaraj from Jeevaraksha Trust, Rachan Appanamaiah, Principal, SVG Center of Excellence PU College & Rtn. Vijai Bopanna, President, Rotary E-Club of Mysuru Center graced the occasion.

Three students who completed the CPR training of Jeevaraksha – Gaanesh PB, Nikhil PP, Nihar VB from SVG Center of Excellence – were given the Jeevaraksha BCLS Certificate by the Chief Guest Sri. Mahadevaswamy.

Participating organizations engaged attendees with interactive demonstrations on Road Safety.

Students from the Interact Clubs of SVG Center of Excellence and Specially Abled Children of Devdan Foundation played an active role in spreading awareness through skits, placards, and public engagement activities.

The Road Safety Awareness Program concluded on a positive note, with a renewed commitment to making Mysuru’s roads safer for all. Organizers expressed their gratitude to the participants and emphasized the need for continued efforts in promoting road safety awareness across the community.