“ರೌಡಿ” ವಿಂಗ್‌ ಕಮಾಂಡರ್‌ ನಿಂದ ಕೊಲೆ ಯತ್ನ ಪ್ರಕರಣ : ಕೆಲಸ ಕಳೆದುಕೊಂಡ ಕನ್ನಡಿಗ ವಿಕಾಸ್‌ .!

'Rowdy' wing commander's attempt to murder case: Kannadiga Vikas loses job

ಬೆಂಗಳೂರು, ಏ.೨೨,೨೦೨೫: ಅಂತೂ,ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋಹಾಗೆ ಆಗಿದೆ. ವಿಂಗ್‌ ಕಮಾಂಡರ್‌ ಒಬ್ಬನಿಂದ ಮಾರಾಣಾಂತಿಕವಾಗಿ ಹಲ್ಲೆಗೀಡಾದ ಡಿಲಿವೇರಿ ಬಾಯ್‌ ಇದೀಗ ಕೆಲಸ ಕಳೆದುಕೊಂಡಿದ್ದಾನೆ. ಉತ್ತರ ಭಾರತ ಮೂಲದ ಸಂಸ್ಥೆ ನಿನ್ನೆ ಘಟನೆ ಬಳಿಕ ವಿಕಾಸ್‌ ಅವರನ್ನು ಕೆಲಸದಿಂದ ತೆಗೆದು ಹಾಕಿದೆ.

ಈ ಬಗ್ಗೆ ಖುದ್ದು ವಿಕಾಸ್‌ ಅವರೇ ಸೋಷಿಯಲ್‌ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ಘಟನೆಯಿಂದ ದೈಹಿಕವಾಗಿ ಜತೆಗೆ ಮಾನಸಿಕವಾಗಿ ಯಾತನೆ ಅನುಭವಿಸಿದ್ದೇನೆ. ಈ ನಡುವೆ ನಾನು ಕೆಲಸ ಮಾಡುವ ಸಂಸ್ಥೆ ನನ್ನನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಹೇಳಿಕೊಂಡಿದ್ದಾರೆ.

ಶೈಲಾದ್ಯಿತ ಬೋಸ್‌ ಎಂಬ ರೌಡಿ ವಿಂಗ್‌ ಕಮಾಂಡರ್‌ ನ ಹಲ್ಲೆಯಿಂದ ಕನ್ನಡಿಗ ವಿಕಾಸ್‌ ನಲುಗಿ ಹೋಗಿದ್ದ. ಇತನ ನೆರವಿಗೆ ಬರಬೇಕಾಗಿದ್ದ ಸಂಸ್ಥೆ ಈಗ ಕೆಲಸದಿಂದ ತೆಗೆದು ಹಾಕುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.

ಏನಿದು ಘಟನೆ:

ಕರ್ನಾಟಕದಲ್ಲಿ ಕನ್ನಡಿಗರ ಸ್ಥಿತಿ. ನಿನ್ನೆಯಷ್ಟೆ ಸೋಷಿಯಲ್‌ ಮೀಡಿಯಾಗಳಲ್ಲಿ ಸೆನ್ಸೇಷನಲ್‌ ಆಗಿದ್ದ ಸುದ್ಧಿಯೊಂದು ಭಾರಿ ಸದ್ದು ಮಾಡಿತ್ತು. ವಿಂಗ್‌ ಕಮಾಂಡರ್‌ ಶೈಲಾದ್ಯಿತ ಬೋಸ್‌ ಅನ್ನೋ ಕಮಂಗಿಯ ಸುಳ್ಳು ಹೇಳಿಕೆ ಹೊರ ರಾಜ್ಯದವರಲ್ಲಿ ಕನ್ನಡಿಗರ ಬಗ್ಗೆ ದ್ವೇಷ ಹುಟ್ಟಿಸಿತ್ತು.

ಆದರೆ, ಸಿಸಿಟಿವಿಯ ಫೂಟೇಜ್‌ ಕಾರಣದಿಂದ ಸತ್ಯಾಂಶ ಬಹಿರಂಗಗೊಂಡಿತು. ಡಿ.ಆರ್.ಡಿ.ಒ ದಲ್ಲಿ ವಿಂಗ್‌ ಕಮಾಂಡರ್‌ ಆಗಿರುವ ವ್ಯಕ್ತಿ, ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲೇ ಡೆಲಿವರಿ ಹುಡುಗನ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದ. ಬಳಿಕ ಆತನೆ ಕಾರಿನಲ್ಲಿ ಸುಳ್ಳು ಮಾಹಿತಿ ಹಂಚಿಕೊಳ್ಳುವ ವಿಡಿಯೋ ಮೂಲಕ ಸಿಂಪತಿಗೆ ಯತ್ನಿಸಿದ್ದ.

ಇದೀಗ ಆತನ ನವರಂಗಿ ಆಟ ಬಯಲಾಗಿದೆ. ಖುದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘಟನೆ ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಜತೆಗೆ ತಪ್ಪಿತಸ್ಥ ಎಷ್ಟೇ ಪ್ರಭಾವಿಯಾಗಿದ್ದರು ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಹಲ್ಲೆಗೊಳಗಾದ ಕನ್ನಡಿಗ ವಿಕಾಸ್‌ ನೆರವಿಗೆ ನಿಲ್ಲಬೇಕಾದ ಉತ್ತರ ಭಾರತ ಮೂಲದ ಸಂಸ್ಥೆ, ಆತನನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ದ್ರೋಹವೆಸಗಿದೆ.

key words: ‘Rowdy’ wing commander, attempt to murder case, Kannadiga, Vikas, Shiladitya Bose

‘Rowdy’ wing commander’s attempt to murder case: Kannadiga Vikas loses job