ಬೆಂಗಳೂರು,ನವೆಂಬರ್,10,2020(www.justkannada.in): ಆರ್.,ಆರ್ ನಗರ ಉಪಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಗೆಲುವು ಬಹುತೇಕ ಖಚಿತವಾಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಈ ಮಧ್ಯೆ ಮಾಧ್ಯಮಗಳ ಜತೆ ಮಾತನಾಡಿ ತಮ್ಮ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ತಾಯಿ ಚಾಮುಂಡಿ ಮೇಲಾಣೆ ಕ್ಷೇತ್ರದ ಅಭಿವೃದ್ದಿ ಮಾಡುವೆ. ಹಳೇ ಬೆಂಗಳೂರು ಈಗಾಗಲೇ ಹೆಚ್ಚಿನ ಅಭಿವೃದ್ಧಿಯಾಗಿದೆ. ಅದಕ್ಕಿಂತ ಹೆಚ್ಚು ನನ್ನ ಕ್ಷೇತ್ರವನ್ನ ಅಭಿವೃದ್ಧಿ ಮಾಡುತ್ತೇನೆ. ಇಂದಿನಿಂದ 20 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದು ನುಡಿದರು.
ಈ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಿಕ್ಕಿದೆ. ಇದಕ್ಕೆ ಕಾರಣರಾದ ನನ್ನ ಕ್ಷೇತ್ರದ ಜನರಿಗೆ ಋಣಿಯಾಗಿರುತ್ತೇನೆ. ಕ್ಷೇತ್ರದ ಜನರಿಗಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹರ್ಷ ವ್ಯಕ್ತಪಡಿಸಿದರು.
ಮುನಿರತ್ನ 1,03,291 ಮತಗಳನ್ನು ಪಡೆದರೇ , ಕಾಂಗ್ರೆಸ್ ನ ಹೆಚ್ ಕುಸುಮಾ 58,743 ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್ ನ ಕೃಷ್ಣಮೂರ್ತಿ 6,381 ಗಳಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 44,548 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.
English summary…
Muniratna swears for the development of his constituency
Bengaluru, Nov. 10, 2020 (www.justkannada.in): The victory of BJP candidate Muniratna, who is contesting from R.R.Nagar Assembly Constituency, in Bengaluru is almost confirmed. Only official announcement is awaited.
“Speaking to the mediamen, he promised to strive for the overall development of his constituency and assured that he would work for 20 hours a day. He also extended his gratitude to the people of the constituency for supporting him.
Key words: RR Nagar- by-election-BJP candidate Muniratna- win- Happiness
Key words: RR Nagar- by-election-BJP candidate Muniratna- win- Happiness