ಬೆಂಗಳೂರು.ಅಕ್ಟೋಬರ್,2,2020(www.justkannada.in): ಆರ್.ಆರ್.ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ನಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ಕೊಡಬೇಕು ಅಂತ ತೀರ್ಮಾನವಾಗಿದೆ ಎಂದು ಎಂಎಲ್ಸಿ ಅಪ್ಪಾಜಿಗೌಡ ತಿಳಿಸಿದ್ದಾರೆ.
ಕುಮಾರಸ್ವಾಮಿ ನೇತೃತ್ವದ ಸಭೆ ಮುಕ್ತಾಯವಾಗಿದ್ದು ಸಭೆ ಬಳಿಕ ಮಾತನಾಡಿದ ಎಂಎಲ್ಸಿ ಅಪ್ಪಾಜಿಗೌಡ ಪ್ರಾಮಾಣಿಕ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ಕೊಡಬೇಕು ಅಂತ ತೀರ್ಮಾನವಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಸೀಟು ಕೊಡಲಾಗುತ್ತೆ. ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಆರ್.ಆರ್. ನಗರ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಜ್ಞಾನಭಾರತಿ ಕೃಷ್ಣಮೂರ್ತಿ ಹೆಸರು ಅಂತಿಮವಾಗಿದೆ. ಈ ಮೂವರ ಹೆಸರಲ್ಲಿ ಒಬ್ಬರನ್ನು ವರಿಷ್ಠರು ಫೈನಲ್ ಮಾಡ್ತಾರೆ ಎಂದರು.
ಕಳೆದ ಎರಡು ಚುನಾವಣೆಯಲ್ಲಿ 50-60 ಸಾವಿರಕ್ಕೂ ಹೆಚ್ಚು ಮತ ಜೆಡಿಎಸ್ ಪಡೆದಿತ್ತು. ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಭ್ರಮನಿರಸರಾಗಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಗೆಲ್ಲುವ ಅವಕಾಶ ಹೆಚ್ಚಿದೆ. ಹೀಗಾಗಿ ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತೆ. ಮೂರು ಜನರಲ್ಲಿ ಒಬ್ಬರಿಗೆ ಟಿಕೆಟನ್ನ ವರಿಷ್ಠರು ಫೈನಲ್ ಮಾಡ್ತಾರೆ ಎಂದು ಅಪ್ಪಾಜಿಗೌಡ ತಿಳಿಸಿದರು.
Key words: RR Nagar -by-election.- JDS -Final decision-mlc- appajigowda.