ಬೆಂಗಳೂರು,ನವಂಬರ್,2,2020(www.justkannada.in): ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಮತದಾನ ನಡೆಯಲಿದ್ದು ಈ ವೇಳೆ ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಆರ್ ಆರ್. ನಗರ ಉಪ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು,ಆರ್ ಆರ್ ನಗರದಲ್ಲಿ 678 ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಮತ ಚಲಾಯಿಸುವ ವ್ಯಕ್ತಿಗೆ ಹ್ಯಾಂಡ್ ಗ್ಲೌಸ್ ಹಾಕಲಾಗುತ್ತದೆ. ನಂತರ ಎಡಗೈನ ಮಧ್ಯ ಬೆರಳಿಗೆ ಶಾಯಿ ಹಾಕಲಾಗುವುದು ಎಂದರು.
ಮತದಾರರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ, ಸಾಮಾಜಿಕ ಅಂತರಕ್ಕೂ ಕ್ರಮ ಕೈಗೊಳ್ಳಲಾಗಿದೆ. ಮತದಾನಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು ಮತದಾರರು ಹೆದರದಂತೆ ಬಂದು ಮತದಾನ ಮಾಡಿ ಎಂದು ಮಂಜುನಾಥ್ ಪ್ರಸಾದ್ ಮನವಿ ಮಾಡಿದರು.
ಹಾಗೆಯೇ ಚುನಾವಣಾ ಪ್ರಚಾರದ ವೇಳೆ ಗುಂಪು ಗುಂಪಾಗಿ ಓಡಾಡಿದ್ದಾರೆ. ಹೀಗಾಗಿ ಎಲೆಕ್ಷನ್ ಮುಗಿದ ಬಳಿಕ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
Key words: RR nagar-by-election- tomorrow- BBMP Commissioner- manjunath Prasad- covid-19- vote -corona infected.