ಬೆಂಗಳೂರು,ಜನವರಿ,6,2022(www.justkannada.in): ಮೈಸೂರಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 16.5 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಕ್ಯಾಬಿನೆಟ್ ನಿರ್ಣಯಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ‘ನಟ, ರಾಜಕಾರಣಿ ದಿಗಂಗತ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ನೀಡಲಾಗುವುದು. ಕಂಠೀರವ ಸ್ವುಡಿಯೋದಲ್ಲೇ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.
ಇನ್ನು ‘ಬೆಂಗಳೂರಿನ 22 ಕೆರೆ, ಹೊಸಕೋಟೆ ಕೆರೆಗಳಿಗೆ ನೀರು ತುಂಬಿಸಲು 93 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಕಾರ್ಕಳ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ 19 ಕೋಟಿ ರೂ. ಮೀಸಲಿಡಲಾಗಿದೆ. ಇನ್ನು ಕೋಲಾರದ ಮುಳಬಾಗಿಲು ಕೋರ್ಟ್ ಕಟ್ಟಡಕ್ಕೆ 16.3 ಕೋಟಿ ರೂ. ದೊಡ್ಡ ಬಳ್ಳಾಪುರ ಮಾರುತಿ ಎಜುಕೇಶನ್ ಟ್ರಸ್ಟ್ಗೆ ಭೂಮಿ ನಿಯಮ ತಿದ್ದುಪಡಿ ಮಾಡಿ 2.8 ಎಕರೆ ಭೂಮಿ ಮಂಜೂರ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದರು.
ಅದಿಚುಂಚನಗಿರಿ ಮಠಕ್ಕೆ 22 ಎಕರೆ ಭೂಮಿ ಮಂಜೂರು ಮಾಡಲಾಗಿದ್ದು, ಹಾಸನ ಜಿಲ್ಲೆ ಹೊಳೆನರಸೀಪುರದ ಹಿರಿಸಾವೆ ಬಳಿ ಭೂಮಿ ನೀಡಲಾಗುವುದು. ಶಾಲೆ, ವಿದ್ಯಾರ್ಥಿ ನಿಲಯ, ಧ್ಯಾನಮಂದಿರ, ಅನಾಥಾಶ್ರಮ ನಿರ್ಮಾಣಕ್ಕೆ ಈ 22 ಎಕರೆ ಭೂಮಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುದ್ರಾಂಕ ಇಲಾಖೆಗೆ ಐಟಿ ಸರ್ವಿಸ್ ಒದಗಿಸಲು ಅನುದಾನ ನೀಡಲಾಗಿದ್ದು, ಐಟಿ ಸರ್ವಿಸ್ ಒದಗಿಸಲು 406 ಕೋಟಿ ಅನುದಾನ ನೀಡಲಾಗುವುದು. ಇನ್ನು ಜಲಜೀವನ್ ಮಿಷನ್ ಅಡಿ ನೀರಿಗಾಗಿ 9152 ಕೋಟಿ ನಿಗದಿ ಮಾಡಲಾಗಿದ್ದು, ವಿಶ್ವಬ್ಯಾಂಕ್ನಿಂದ ಸಾಲ ಪಡೆಯಲು ಸಚಿವ ಸಂಪುಟ ಅಸ್ತು ಎಂದಿದೆ ಎಂದು ಸಚಿವರು ತಿಳಿಸಿದರು.
ಇನ್ನು ಸಚಿವ ಸಂಪುಟ ಶುಶ್ರೂಷಕರ 80 ಹುದ್ದೆಗಳಿಗೆ ನೇರ ನೇಮಕಾತಿಗೆ ಒಪ್ಪಿಗೆ ನೀಡಿದ್ದು, ಗುತ್ತಿಗೆ ಆಧಾರದಲ್ಲಿ ಇದ್ದವರಿಗೆ 20 ಅಂಕಗಳವರೆಗೆ ಗ್ರೇಸ್ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಕಳದಲ್ಲಿ ನ್ಯಾಯಲಯದ ಸಂಕೀರ್ಣದಲ್ಲಿ ಹೆಚ್ಚುವರಿ ಕಟ್ಟಡಕ್ಕೆ 19.72 ಕೋಟಿ ರೂ ನೀಡಲಾಗಿದೆ. ಉಡುಪಿಯ ಕಾಪುವಿ ನಲ್ಲಿ 10 ಸೆಂಡ್ಸ್ಗಳನ್ನು ಲೀಸ್ ಆಧಾರದಲ್ಲಿ ಬಂಟರ ಸಂಘಕ್ಕೆ ನೀಡಲು ತೀರ್ಮಾನಿಸಲಾಗಿದೆ. ಮೈಸೂರಿನಲ್ಲಿ ಒಕ್ಕಲಿಗರ ಸಂಘಕ್ಕೆ ಎರಡು ಎಕರೆ ಜಮೀನು ನೀಡಲಾಗಿತ್ತು. ಅದನ್ನು ಶೈಕ್ಷಣಿಕ ಜಾಗ ಅಂತ ಮಾಡಿ ಸ್ವಲ್ಪ ತಿದ್ದುಪಡಿ ಮಾಡಿ ನೀಡಲಾಗಿದೆ ಎಂದರು.
ರಾಜ್ಯಾದ್ಯಂತ ನೋಂದಣಿ, ಮುದ್ರಾಂಕ ಇಲಾಖೆಗೆ ಐಟಿ ಉಪಕರಣಗಳಿಗೆ ಸರ್ವಿಸ್ ಪ್ರೋವೆಡರ್ಗಳಿಗೆ 406.44 ಕೋಟಿ ನೀಡಲಾಗಿದೆ. ಮೈಸೂರಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 16.5 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ. ಜೋಗ್ ಜಲಪಾತ ಅಭಿವೃದ್ಧಿಗೆ ಪಿಪಿಪಿ ಅಡಿ ರೋಫ್ ವೇ, ಫೈವ್ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ 116 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ ಎಂದರು.
ಬಿಬಿಎಂಪಿ ಸ್ವಯಂ ಆಸ್ತಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, 78 ಸಾವಿರ ಜನರಿಗೆ ನೋಟಿಸ್ ನೀಡಲಾಗಿತ್ತು. ಪ್ರಕರಣಗಳಲ್ಲಿ ಕಡಿಮೆ ತೆರಿಗೆ ಕಟ್ಟಿದ್ರು. ಅದರಲ್ಲಿ ಪೆನಾಲ್ಟಿ ಹಾಕಿ ದಂಡ ಹಾಕಿ ವಾಪಸ್ ಕಟ್ಟಲು ನಿರ್ಧಾರ ಮಾಡಲಾಗಿದೆ. 2% ಪ್ರತೀ ವರ್ಷ ಕಟ್ಟಲು ಅನುಮತಿ ನೀಡಲಾಗಿದೆ. ವಲಯ ತಪ್ಪಾಗಿ ಗುರ್ತಿಸಲಾಗಿತ್ತು. ನಮ್ಮಿಂದಲೂ ತಪ್ಪಾಗಿದ್ದರಿಂದ ಹಣ ಕಟ್ಟಿದವರಿಗೆ ಹೆಚ್ಚು ಕಟ್ಟಿದ್ರೆ ಉಳಿಕೆ ಮಾಡಲಾಗುವುದು. ಹೆಚ್ಚು ಕಟ್ಟಬೇಕಾದವರಿಗೆ ಕಟ್ಟಲು ಸೂಚನೆ ನೀಡಲಾಗುತ್ತದೆ ಎಂದರು.
ದಾವಣಗೆರೆ ದೇವಾಂಗ ಸಂಘದವರಿಗೆ ಜಮೀನು ಮಂಜೂರು ಮಾಡಲಾಗಿದೆ. 6 ಲಕ್ಷ ಹಣ ಕಟ್ಟಿದ್ರು ಬಾಕಿ ಕಟ್ಟಲು ಸಾಧ್ಯವಿಲ್ಲ ಅಂತ ಮನವಿ ಮಾಡಿದ್ರು. ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಹೆಬ್ಬಾಳ ಪ್ಲೈಓವರ್ ಅಭಿವೃದ್ಧಿ ನಿರ್ಧಾರ ಮಾಡಿ, 10 ಪಥಗಳ ರಸ್ತೆ ಏರ್ಪೋರ್ಟ್ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೊವೀಡ್ 19 ರವರೆಗೆ ಮಾರ್ಗಸೂಚಿ ಕೊಟ್ಟಿದ್ದೀವಿ. ಕೆಲವು ಕಡೆ ಸಚಿವರು ಪಾಸಿಟಿವ್ ರೇಟ್ ಇಲ್ಲ. 14, 15ಕ್ಕೆ ತಜ್ಞರ ಜೊತೆ ಸಭೆ ನಡೆಸಿ ಮಾರ್ಗಸೂಚಿ ಬದಲಾವಣೆ ಮಾಡಲಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಪಾಸಿಟಿವ್ ರೇಟ್ ಕಡಿಮೆ ಇದೆ. ಈ ಬಗ್ಗೆ ಕೆಲಸ ಸಚಿವರು ಪ್ರಸ್ತಾಪ ಮಾಡಿದ್ದಾರೆ ಎಂದರು.
ಪಾದಯಾತ್ರೆ ತಡೆಯಲು ಮಾರ್ಗಸೂಚಿ ಜಾರಿ ಮಾಡಿದ್ದೀವಿ. ಪಾದಯಾತ್ರೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದಾಗಿ ಹೇಳಿದರು.
ಕೋವಿಡ್ ಟಫ್ ರೂಲ್ಸ್ ಬಗ್ಗೆ ಮಾತನಾಡಿದ ಸಚಿವ ಮಾದುಸ್ವಾಮಿ, ಜನವರಿ.19 ರವರೆಗೂ ಕೋವಿಡ್ ನಿಯಮ ಕೊಟ್ಟಿದ್ದೇವೆ. ಕೆಲ ಸಚಿವರು ಎಲ್ಲಿ ಕೋವಿಡ್ ಕಡಿಮೆ ಇದೆ ಅಲ್ಲಿ ಯಾಕೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 14-15 ತಾರೀಖಿನಿಂದು ಮತ್ತೊಮ್ಮೆ ಪುನರ್ ಪರಾಮರ್ಶೆ ಮಾಡಲಾಗುತ್ತದೆ. ತಜ್ಞರು, ಟಾಸ್ಕ್ ಫೋರ್ಸ್ ಜತೆ ಸಭೆ ನಡೆಸಿ ಮುಂದುವರೆಸಬೇಕಾ ಬೇಡ್ವಾ ಅನ್ನೋದನ್ನ ತೀರ್ಮಾನ ಮಾಡ್ತೀವಿ. ಜ.14, 15 ರಂದು ಮತ್ತೊಮ್ಮೆ ರಿವ್ಯೂ ಮೀಟಿಂಗ್ ಮಾಡ್ತೀವಿ ಎಂದು ತಿಳಿಸಿದರು.
Keyw words: Rs 16.5 crore -additional –money- released – Ambedkar Bhavan – Mysore