ಬೆಂಗಳೂರು,ಜುಲೈ,31,2023(www.justkannada.in): ಈ ಬಾರಿ ಎಸ್ ಸಿಎಸ್ಪಿ-ಟಿಎಸ್ ಪಿ ಅಡಿ 4030 ಕೋಟಿ ರೂ. ಅನುದಾನ ಹೆಚ್ಚಳವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಪರಿಶಿಷ್ಟ ಜಾತಿ/ಪಂಗಡಗಳ ಪರಿಷತ್ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ, ಪರಿಶಿಷ್ಟ ಜಾತಿ/ಪಂಗಡಗಳ ಪರಿಷತ್ ಸಭೆ ನಡೆಸಲಾಗಿದೆ. ಯೋಜನಾ ವೆಚ್ಚಕ್ಕೆ ಅನುಗುಣವಾಗಿ ಎಸ್ ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಎಸ್ ಸಿಎಸ್ಪಿ-ಟಿಎಸ್ಪಿ ವಿಶೇಷ ಉಪಯೋಜನೆಯಡಿ ಅನುದಾನ ದುರ್ಬಳಕೆ ಆಗುತ್ತಿತ್ತು. ಬೇರೆ ಬೇರೆ ವಲಯಗಳಿಗೂ ಈ ಅನುದಾನ ಬಳಸಲಾಗ್ತಿತ್ತು. ಈಗ ಈ ಬಜೆಟ್ ನಲ್ಲಿ ಈ ಯೋಜನೆಗಳಡಿ ಬೇರೆ ವಲಯಗಳಿಗೆ ಅನುದಾನ ಬಳಸಿಕೊಳ್ಳುವುದಕ್ಕೆ ನಿರ್ಬಂಧ ಹಾಕಲಾಗಿದೆ. ಇದಕ್ಕಾಗಿ ಈ ಯೋಜನೆಯಲ್ಲಿ ಬರುವ 7ಡಿ ನಿಯಮ ರದ್ದು ಮಾಡಲಾಗಿದೆ. ಈ ಬಾರಿ ಎಸ್ ಸಿಎಸ್ಪಿ-ಟಿಎಸ್ ಪಿ ಅಡಿ 4030 ಕೋಟಿ ರೂ ಅನುದಾನ ಹೆಚ್ಚಳ ಆಗಿದೆ. ಎಸ್ಸಿ ಎಸ್ಪಿ ಯೋಜನೆಗೆ 24,333 ಕೋಟಿ, ಟಿಎಸ್ಪಿ ಅಡಿ 9961 ಕೋಟಿ ಈ ವರ್ಷ ನಿಗದಿ ಮಾಡಲಾಗಿದೆ. ಹಾಸ್ಟೆಲ್ ಗಳಲ್ಲಿ ಯಾರಿಗೂ ಸೀಟ್ ಇಲ್ಲ ಅಂತ ಹೇಳಬಾರದು ಅಂತ ಸಿಎಂ ಸಲಹೆ ಕೊಟ್ಟಿದ್ದಾರೆ. ಹೆಚ್ಚು ಹಾಸ್ಟೆಲ್ ಗಳನ್ನು ತೆರೆಯಲು ಸೂಚಿಸಿದ್ದಾರೆ ಎಂದರು.
ಗೃಹಲಕ್ಷ್ಮಿ ಯೋಜನೆಗೆ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯ ಹಣ ಬಳಕೆ ಆರೋಪ ಆಧಾರ ರಹಿತ..
ಗೃಹಲಕ್ಷ್ಮಿ ಯೋಜನೆಗೆ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯ 6 ಸಾವಿರ ಕೋಟಿ ಹಣ ಬಳಕೆ ಮಾಡಲಾಗಿದೆ ಎಂಬ ಬಿಜೆಪಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಬಿಜೆಪಿಯವರ ಆರೋಪ ಆಧಾರ ರಹಿತ. ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯ ಹಣದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮಾತ್ರ ಹಣ ಕೊಡುತ್ತೀವಿ. ಗ್ಯಾರಂಟಿ ಸ್ಕೀಂಗಳಲ್ಲಿ ಎಸ್ಸಿ, ಎಸ್ಟಿ ಸಮಯದಾಯಗಳಿಗೆ ಆಯಾಯಾ ಇಲಾಖೆಗಳಿಗೆ 24.1% ಅನುದಾನ ಕೊಡುತ್ತೀವಿ ಎಂದು ಸ್ಪಷ್ಟನೆ ನೀಡಿದರು.
ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯ ನಿಧಿ ದುರ್ಬಳಕೆ ಬಗ್ಗೆ36 ದೂರುಗಳು ಬಂದಿವೆ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾವು ಮೌನವಾಗಿಲ್ಲ, ಕಣ್ಮುಚ್ಚಿ ಕೂತಿಲ್ಲ. ಎಲ್ಲವೂ ತನಿಖೆ ಆಗುತ್ತಿದೆ. ಎಸ್ ಸಿಎಸ್ ಪಿ-ಟಿಎಸ್ ಪಿ ಅನುದಾನ ದುರ್ಬಳಕೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿದ್ದೇವೆ. ತನಿಖೆ ಈಗಾಗಲೇ ನಡೀತಿದೆ. ಮತ್ತಷ್ಟು ದೂರುಗಳು ಬಂದರೂ ತನಿಖೆ ಮಾಡುತ್ತೇವೆ ಎಂದರು.
Key words: Rs 4030 cror under-SCSP-TSP- Grant- increase- Minister- HC Mahadevappa.