ರಾಮನಗರ, ಮೇ 11, 2020 (www.justkannada.in): ಅಪಘಾತದಲ್ಲಿ ಮೃತಪಟ್ಟ ಪಬ್ಲಿಕ್ ಟಿವಿ ವಾಹಿನಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು, ಪತ್ರಕರ್ತನ ಪತ್ನಿಗೆ ಕೆಎಂಎಫ್ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಹನುಮಂತು ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ವೈಯಕ್ತಿಕವಾಗಿ 5 ಲಕ್ಷ ರೂ. ಚೆಕ್‌ಅನ್ನು ಕುಟುಂಬದವರಿಗೆ ನೀಡಿದರು.
ಕೆಎಂಎಫ್ ಅಧ್ಯಕ್ಷರಿಗೆ ಪತ್ರ ಬರೆದು, ಅವರ ಜತೆ ಮಾತನಾಡಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹನಮಂತಿ ಅವರ ಪತ್ನಿ ಎನ್. ಶಶಿಕಲಾ ಅವರಿಗೆ ಕೆಲಸ ಕೊಡಿಸುವುದಾಗಿ ಹೇಮಲತಾ ಅವರಿಗೆ ಭರವಸೆ ನೀಡಿದರು. ಜತೆಗೆ, ಸರ್ಕಾರದ ಕಡೆಯಿಂದ ಬರಬೇಕಿರುವ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ.
ಕಳೆದ ಏಪ್ರಿಲ್ 21ರಂದು ರಾಮನಗರದಲ್ಲಿ ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಹನುಮಂತು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಂದೇ ಡಾ. ಅಶ್ವತ್ಥನಾರಾಯಣ ಅವರು 5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು.
ಈ ಮಧ್ಯೆ, ಬೆಂಗಳೂರಿನ ಖಾಸಗಿ ವಾಹಿನಿಯ ವಾಹಿನಿಯ ಕೊರೊನಾ ಸೋಂಕಿತ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದ ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದರು. ಹೀಗಾಗಿ ಉಪಮುಖ್ಯಮಂತ್ರಿಯವರ ರಾಮನಗರ ಭೇಟಿಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು.